ಧಾರವಾಡ ಗ್ರಾಮೀಣ CPI, ಗರಗ ಠಾಣೆ PSI ಮೇಲೆ ಕಾನೂನು ಕ್ರಮಕ್ಕೆ ಆಗ್ರಹ…
1 min readಧಾರವಾಡ: ಪ್ರಕರಣದಲ್ಲಿ ಭಾಗಿಯಾಗದ ಅಮಾಯಕರನ್ನ ಕೇಸಿನಲ್ಲಿ ಹಾಕಿ ಕಿರುಕುಳ ನೀಡುತ್ತಿರುವ ಧಾರವಾಡ ಗ್ರಾಮೀಣ ಸಿಪಿಐ ಹಾಗೂ ಗರಗ ಪೊಲೀಸ್ ಠಾಣೆಯ ಪಿಎಸ್ಐ ಮೇಲೆ ಕಾನೂನು ಕ್ರಮ ಜರುಗಿಸುವಂತೆ ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಹಾಗೂ ಬಿಜೆಪಿ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.
ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಚಾರ್ಜಸೀಟ್ ಕೂಡಾ ಹಾಕಿ ಹಲವು ತಿಂಗಳ ನಂತರ ಬಂಧನ ಮಾಡಲು ಮುಂದಾಗಿದ್ದಾರೆಂದು ಮನವಿಯನ್ನ ವಿವರಿಸಲಾಗಿದ್ದು, ಇದಕ್ಕೆ ಕಾರಣವಾದ ಸಿಪಿಐ ಮತ್ತು ಪಿಎಸ್ಐ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಮಾಜಿ ಶಾಸಕಿ ಸೀಮಾ ಮಸೂತಿ, ನಿಗಮದ ಅಧ್ಯಕ್ಷ ತವನಪ್ಪ ಅಷ್ಟಗಿ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಕೆಎಂಎಫ್ ಅಧ್ಯಕ್ಷ ಶಂಕರ ಮುಗದ, ವಿಎಚ್ ಪಿಯ ಸಂಜೀವ ಬಡಸ್ಕರ, ಯುವ ಮೋರ್ಚಾ ಅಧ್ಯಕ್ಷ ಶಂಕರ ಕೋಮಾರದೇಸಾಯಿ, ಬಸವರಾಜ ಕೌಜಲಗಿ, ಗೋವರ್ಧನರಾವ ಸೇರಿದಂತೆ ಹಲವರು ಉಪಸ್ಥಿತರಿದ್ದರು.