Posts Slider

Karnataka Voice

Latest Kannada News

ವೀರಪ್ಪನ್ ಬೇಟೆ ಹಿಂದಿನ ಅಸಲಿ ಕಹಾನಿ.. ಹುಬ್ಬಳ್ಳಿ ಧಾರವಾಡ “ಡಿಸಿಪಿ” ಕಂಡದ್ದು…..

1 min read
Spread the love

ಆನೆಯ ದಂತಚೋರ, ಶ್ರೀಗಂಧದ ಸಾಮ್ರಾಜ್ಯದ ದರೋಡೆಕೋರ ವೀರಪ್ಪನ್ ಜೀವನ, ಮರಣ ಎಲ್ಲ ಕಾಲಕ್ಕೂ ಪ್ರಸ್ತುತ. ಈತನ ಕಾರ್ಯಾಚರಣೆ ವೇಳೆಯಲ್ಲಿ ಕರ್ನಾಟಕದ ಹಲವು ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. 

ಈ ಟೀಂನಲ್ಲಿದ್ದ ಅಧಿಕಾರಿಯೋರ್ವರು ನಮ್ಮ ಹುಬ್ಬಳ್ಳಿ-ಧಾರವಾಡದಲ್ಲಿ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರೇ ಡಿಸಿಪಿ ರವೀಶ ಸಿ.ಆರ್. ಬಡತನದಿಂದ ಬೆಳೆದು ನೂರಾರೂ ಜನರಿಗೆ ಸಹಾಯ ಮಾಡುತ್ತ ಮತ್ತೂ ಅಧಿಕಾರದ ದರ್ಪ ತೋರಿಸದ ಇವರು, ವೀರಪ್ಪನ್ ಬೇಟೆಯ ಬಗ್ಗೆ ವಿವರವಾಗಿ ಬರೆಯಲಿದ್ದು, ಕರ್ನಾಟಕವಾಯ್ಸ್. ಕಾಂನಲ್ಲಿ ಪ್ರಕಟಗೊಳ್ಳಲಿದೆ.

ನಿಮ್ಮ ಅಭಿಪ್ರಾಯವನ್ನ ನೇರವಾಗಿ ಡಿಸಿಪಿಯವರಿಗೆ ತಿಳಿಸಬಹುದು. ಅಥವಾ ಕರ್ನಾಟಕವಾಯ್ಸ್.ಕಾಂ ಮೂಲಕವೂ ತಿಳಿಸಬಹುದಾಗಿದೆ.

ವೀರಪ್ಪನ್ ಬೇಟೆಯ ಜಾಡು…. 

ಬರಹ: ರವೀಶ್ ಸಿ.ಆರ್ ಡಿಸಿಪಿ ಹುಬ್ಬಳ್ಳಿ ಧಾರವಾಡ

ವೀರಪ್ಪನ್ ಹಾಗೂ ಆತನಿದ್ದ 17000 ಚದುರ ಕಿಲೋಮೀಟರ್ ಅರಣ್ಯ, ಆ ಅರಣ್ಯದಲ್ಲಿ ಹೊಸಬರಾಗಿ ಸಂಬಳಕ್ಕಾಗಿ ದುಡಿವ ನಮ್ಮಂತಹ ಅಧಿಕಾರಿಗಳ ತಳಮಳ, ಈಚೆ ಕುಟುಂಬವಾದರೆ ಆಚೆ ಅನ್ನ ನೀಡಿದ ಇಲಾಖೆ. ಎರಡನ್ನೂ ಬಿಡದೆ ತಳಮಳಿಸುವ ಜೀವ.

ಮಲೈ ಮಹಾದೇಶ್ವರ ಬೆಟ್ಟ, ಮಾಕಂಪಾಳ್ಯ, ಬಸವನಾಪುರಂ, ಬೈಲೂರು, ಹನೂರು, ಗೋಪಿನಾಥಂ, ನಾಗಮಲೈ, ಗುಂಡ್ರಿ, ಕಡಂಬೂರು, ದಿಂಬಂ, ಹಾಂದಿಯೂರು, ಗೋಪಿಚೆಟ್ಟಿ ಪಾಳ್ಯಂ ಹೀಗೆ ಹಲವು ಪ್ರದೇಶಗಳ ವಲಸಿಗ ನಾನು. ಬನ್ನಾರಿಯಮ್ಮನ್ ತಾಯಿಯ ಆಶೀರ್ವಾದ ಪಡೆದು ಭವಾನಿಸಾಗರಲ್ಲಿ ಈಜಾಡಿ ಮೆಟ್ಟೂರಿನ ಸ್ಟ್ಯಾನ್ಲಿ ಜಲಾಶಯವನ್ನ ಕಣ್ತುಂಬಿ, ಹೋಗೇನಕಲ್ಲಿನ ಜಲಪಾತದ ಸೌಂದರ್ಯ ಸವಿದುದರೊಟ್ಟಿಗೆ ವೀರಪ್ಪನ್ ಎಂಬ ದುರಳನ ಕ್ರೌರ್ಯದೊಂದಿಗೆ ಈ ವ್ಯವಸ್ಥೆಯಲ್ಲಿ ಬದುಕಿ ಬಂದವನು.

ನನ್ನ ಆ ಕಾಡಿನ, ಆದಿನದ ತಳಮಳ, ಆತಂಕ, ಕುಟುಂಬದ ಕಾಡುವ ನೆನಪು, ಕಾಡು ಪ್ರಾಣಿಗಳ ನಡವಳಿಕೆಯ ನಿಮ್ನ ಮುಂದಿಡುವ ಪ್ರೇರಣೆಯಿಂದ ನನ್ನ ಅನುಭವದ ಕಥನವನ್ನು ನಿಮ್ಮ ಮುಂದಿಡಲು ತೀರ್ಮಾನಿಸಿರುವೆ.

ನಿಮಗೆ ಒಪ್ಪಿತವಾದರೆ ಅರಗಿಸಿಕೊಳ್ಳಿ, ಬೇಡವೆಂದಾದರೆ ಡಿಲಿಟ್ ಮಾಡಿಬಿಡಿ. ಇಂದಿನಿಂದ ನಿಮ್ಮ ಮುಂದು ನನ್ನ ಅನುಭವದ ಕಥನ.

ವೀರಪ್ಪನ್ ಬೇಟೆಯ ಹಾದಿಯಲ್ಲಿ

ಧಾರವಾಹಿಯ ರೀತಿ ನಿಮಗೆ ಕಳಿಸುವೆ, ನಿಮ್ಮ ರೆಸ್ಪಾನ್ಸ್ ನನಗೆ ಆಕ್ಸಿಝನ್ ಆಗಿರಲಿ…


Spread the love

Leave a Reply

Your email address will not be published. Required fields are marked *

You may have missed