ವನ್ಯಜೀವಿ ಮಂಡಳಿಗೆ “ವೈಶಾಲಿ ಕುಲಕರ್ಣಿ” ನೇಮಕ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರಕಾರ…

ಧಾರವಾಡ: ರಾಜ್ಯ ಸರಕಾರದ ವನ್ಯಜೀವಿ ಮಂಡಳಿಗೆ ಧಾರವಾಡ-71 ಕ್ಷೇತ್ರದ ಶಾಸಕ ವಿನಯ ಕುಲಕರ್ಣಿಯವರ ಪುತ್ರಿಯನ್ನ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ವೈಶಾಲಿ ಕುಲಕರ್ಣಿ ಅವರನ್ನ ವನ್ಯಜೀವಿ ಮಂಡಳಿಗೆ ನೇಮಕ ಮಾಡಲಾಗಿದ್ದು, ಇನ್ನೂ ಹಲವರನ್ನ ಮಂಡಳಿಗೆ ನೇಮಕ ಮಾಡಿದೆ.
ವೈಶಾಲಿ ಕುಲಕರ್ಣಿಯವರ ಆದೇಶದ ಪ್ರತಿ ಹೊರ ಬಿದ್ದಿದ್ದು, ಹಲವರು ಶುಭಾಶಯಗಳನ್ನ ಕೋರಿ, ವಾಟ್ಸಾಫ್ ಸ್ಟೇಟಸ್‌ಗಳನ್ನೂ ಹಾಕಿಕೊಂಡಿದ್ದಾರೆ.