EXCLUSIVE- ಜೈಲು ಸೇರಿರುವ ಸೊಗಲದ “ಆತನ” ಮೇಲೆ ಹಣವನ್ನೇಗೆ ತೂರಿದ್ದ ಗೊತ್ತಾ..! ಮಿಸ್ ಮಾಡ್ದೆ ನೋಡಿ..
ಧಾರವಾಡ: ಆಸ್ತಿಯನ್ನ ಖರೀದಿ ಮಾಡಿಕೊಳ್ಳದೇ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಮಕ್ತುಂ ಸೊಗಲದ ಜೈಲು ಪಾಲಾಗಿದ್ದು ಎಲ್ಲರಿಗೂ ಗೊತ್ತಿದೆಯಾದರೇ, ಆತ ಹಣವನ್ನ ಹೇಗೆ ಎಸೆಯುತ್ತಿದ್ದ ಎಂಬುದಕ್ಕೆ ಸಾಕ್ಷಿಯಾಗಿ ವೀಡಿಯೊಂದು ವೈರಲ್ ಆಗಿದ್ದು, ಇಂತಹ ವೀಡಿಯೋವನ್ನ ನೀವೆಂದೂ ವಿದ್ಯಾನಗರಿಯಲ್ಲಿ ಕಾಣಲು ಸಾಧ್ಯವೇಯಿಲ್ಲ ಬಿಡಿ..
ವೈರಲ್ ಆಗಿರೋ ವೀಡಿಯೋ
ಪೊಲೀಸ್ ಪ್ರಕಟಣೆಯಲ್ಲಿನ ವಿವರ
ಈಗಾಗಲೇ ಗುಲಗಂಜಿಕೊಪ್ಪದ ಮಾರುತಿ ಗುಡಿ ಹತ್ತಿರದ ಅಜ್ಜಪ್ಪ ಗುರುಬಸಪ್ಪ ಗೆಂಗಣ್ಣವರ @ ಗೆಂಗಾಣಿ ಹಾಗೂ ಸಾಕ್ಷಿದಾರರಾದ ಭೀಮಪ್ಪ ಗುರುಬಸಪ್ಪ ಗೆಂಗಾಣಿ @ ಗೆಂಗಣ್ಣವರ ಹಾಗೂ ಶಿವಲಿಂಗಪ್ಪ ಗುರುಬಸಪ್ಪ ಗೆಂಗಾಣಿ @ ಗೆಂಗಣ್ಣವರ ಇವರಿಗೆ ಸಂಬಂಧಿಸಿದ ಮಾಳಾಪೂರ ವಿ ಗ್ರಾಮದ 05 ಎಕರೆ 01 ಗುಂಟೆ ಶೇತ್ಕಿ ಜಮೀನಿನಲ್ಲಿ ಆರೋಪಿ ಮಕ್ತುಮಹುಸೇನ ದಿಲಾವರಸಾಬ ಸೊಗಲದ ಹಾಗೂ ಸಲೀಂ ಶೇಖಸನದಿ ಕೂಡಿ ಅಕ್ರಮ ಪ್ರವೇಶ ಮಾಡಿ, ಶೆಡ್ ನಿರ್ಮಾಣ ಮಾಡಿ, ಕಬ್ಜಾ ಪಡೆದುಕೊಂಡು ದೂರುದಾರರ ಹಾಗೂ ಅವರ ಸಹೋದರರ ಆಸ್ತಿಯನ್ನೂ ಖರೀದಿ ಮಾಡಿಕೊಳ್ಳದೆ, ಹಣವನ್ನೂ ಕೊಡದೆ ಮೊಸಪಡಿಸಿದ್ದು ಅಲ್ಲದೆ ಕೇಳಲು ಹೋದ ದೂರುದಾರರಿಗೆ ಹಾಗೂ ಸಾಕ್ಷಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವ ಬೆದರಿಕೆ ಹಾಕಿದ್ದರ ಬಗ್ಗೆ ಅಜ್ಜಪ್ಪ ತಂದೆ ಗುರುಬಸಪ್ಪ ಗೆಂಗಣ್ಣವರ @ ಗೆಂಗಾಣಿ ಇವರು ನೀಡಿದ ದೂರಿನ ಮೇರೆಗೆ ಧಾರವಾಡ ಉಪನಗರ ಠಾಣೆಯಲ್ಲಿ ಗುನ್ನಾ ನಂ. 44/2020 447, 420, 504, 506, ಸಹಕಲಂ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿತನಾದ ಮಕ್ತುಮಹುಸೇನ ದಿಲಾವರಸಾಬ ಸೊಗಲದ ಸಾಃ ಜುಮ್ಮಾ ಮಸೀದಿ ಹತ್ತಿರ ಪೆಂಡಾರಗಲ್ಲಿ ಧಾರವಾಡ ಈತನಿಗೆ ದಸ್ತಗೀರ ಮಾಡಿ ಕಾನೂನ ಕ್ರಮ ಜರುಗಿಸಿದ್ದು ಇರುತ್ತದೆ.
ಸದರ ಪ್ರಕರಣವನ್ನು ಆರ್. ದಿಲೀಪ್. ಐಪಿಎಸ್. ಪೊಲೀಸ್ ಆಯುಕ್ತರು, ಕೃಷ್ಣಕಾಂತ. ಪಿ. ಐಪಿಎಸ್. ಉಪ-ಪೊಲೀಸ್ ಆಯುಕ್ತರು (ಕಾವಸು), ಆರ್. ಬಿ. ಬಸರಗಿ. ಉಪ-ಪೊಲೀಸ್ ಆಯುಕ್ತರು (ಅ.ವಿ), ಹುಬ್ಬಳ್ಳಿ-ಧಾರವಾಡರವರ ಹಾಗೂ ಅನುಷಾ ಜಿ. ಸಹಾಯಕ ಪೊಲೀಸ್ ಆಯುಕ್ತರು ಧಾರವಾಡ ಶಹರ ಉಪ-ವಿಭಾಗ, ಪ್ರಮೋದ ಸಿ ಯಲಿಗಾರ ಪೊಲೀಸ್ ಇನ್ಸಪೆಕ್ಟರ್ ಉಪನಗರ ಪೊಲೀಸ್ ಠಾಣೆ ಇವರ ಮಾರ್ಗದರ್ಶನದಲ್ಲಿ ಎಸ್.ಎಂ.ಹುಣಶೀಕಟ್ಟಿ ಪಿಎಸ್‍ಐ (ಕಾವಸು) ಉಪನಗರ ಠಾಣೆ ಧಾರವಾಡ ಇವರ ನೇತೃತ್ವದಲ್ಲಿ ಅಧಿಕಾರಿ ವ ಸಿಬ್ಬಂದಿಗಳೊಂದಿಗೆ ಪ್ರಕರಣವನ್ನು ಭೇದಿಸಿ ಮೇಲ್ಕಂಡ ಆರೋಪಿತನಿಗೆ ದಸ್ತಗೀರ ಮಾಡಿ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.