ಉರ್ದು ಶಾಲೆಯ ಶಿಕ್ಷಕನಿಗೆ “ಚಪ್ಪಲಿ ಹಾರ” ಹಾಕಿ ಪಟ್ಟಣದ ತುಂಬ ಮೆರವಣಿಗೆ ಮಾಡಿದ ಪಾಲಕರು…!!!!
ಶಾಲೆಗೆ ಆಗಮಿಸಿ ವಿಚಾರಣೆ ನಡೆಸುವ ವೇಳೆ
ಹಲವರಿಂದ ಶಿಕ್ಷಕನ ಮೇಲೆ ಹಲ್ಲೆ
ಹಾವೇರಿ: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕನಿಗೆ ಧರ್ಮದೇಟು ನೀಡಿದ ಪೋಷಕರು ಹಾಗೂ ಸ್ಥಳೀಯರು ಶಾಲೆಯಿಂದ ಪೊಲೀಸ್ ಠಾಣೆಯವರೆಗೆ ಮೆರವಣಿಗೆ ನಡೆಸಿದ ಘಟನೆ ಹಾವೇರಿ ಜಿಲ್ಲೆ ಸವಣೂರು ಪಟ್ಟಣದಲ್ಲಿ ನಡೆದಿದೆ.
ಸವಣೂರಿನ ಸರ್ಕಾರಿ ಉರ್ದು ಉನ್ನತೀಕರಿಸದ ಶಾಲೆಯಲ್ಲಿ ಘಟನೆ ನಡೆದಿದ್ದು, ಜಗದೀಶ್ ಎಂಬ ಶಿಕ್ಷಕನಿಗೆ ಸಾರ್ವಜನಿಕರು ಹಾಗೂ ಪೋಷಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ಕುರಿತು ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ…
ಶಾಲೆಯಿಂದ ಧರ್ಮದೇಟು ನೀಡುತ್ತಾ ಠಾಣೆಯ ಕರೆದುಕೊಂಡು ಬಂದ ಪೋಷಕರು, ಶಿಕ್ಷಕ ಜಗದೀಶಗೆ ತಕ್ಕ ಶಿಕ್ಷೆಯಾಗುವಂತೆ ಆಗ್ರಹಿಸಿ ಸವಣೂರು ಪೊಲೀಸರಿಗೆ ಒಪ್ಪಿಸಿದ್ದಾರೆ.
