ಶಿಕ್ಷಕರಿಗೆ ತರಬೇತಿ ಉರ್ದು ಮಾಧ್ಯಮದಲ್ಲೂ ನೀಡಿ: ಶಿಕ್ಷಕರ ಸಂಘ ಆಗ್ರಹ
1 min readವಿಜಯಪುರ: ನವೆಂಬರ್ ಮೂರರಿಂದ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರಿಗೆ ಆರಂಭವಾಗಲಿರುವ ನಿಷ್ಟಾ ಆನ್ ಲೈನ್ ತರಬೇತಿಯನ್ನ ಉರ್ದುಮಾಧ್ಯಮದ ಶಿಕ್ಷಕರಿಗೆ ಅದೇ ಭಾಷೆಯಲ್ಲಿ ತರಬೇತಿ ನೀಡಬೇಕೆಂದು ಉರ್ದು ಕರಾಟ ಶಿಕ್ಷಕರ ಸಂಘ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಸಂಘವೂ, ತರಬೇತಿಯು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ನಡೆಯುವುದರಿಂದ ಉರ್ದು ಶಿಕ್ಷಕರಿಗೆ ವಿಷಯಗಳನ್ನ ಅರ್ಥೈಸಿಕೊಳ್ಳಲು ತೊಂದರೆಯಾಗುತ್ತಿದೆ. ಹೀಗಾಗಿ ಉರ್ದು ಭಾಷೆಯಲ್ಲಿಯೇ ತರಬೇತಿಯನ್ನ ನೀಡುವುದು ಒಳಿತು ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಸರಕಾರ ತರಬೇತಿ ನೀಡಲು ಮುಂದಾಗಿರುವುದು ಶಿಕ್ಷಕರಿಗೂ ಸಾಕಷ್ಟು ಅನುಕೂಲವಾಗಲಿದೆ. ಅದೇ ಕಾರಣಕ್ಕೆ ಭಾಷೆಯ ಸಮಸ್ಯೆ ಆಗಬಾರದೆಂದು ತಿಳಿಸುವ ಪ್ರಯತ್ನ ಮಾಡಿರುವ ಸಂಘವೂ, ಉರ್ದು ಮಾಧ್ಯಮದವರಿಗೆ ಅವರದ್ದೇ ಭಾಷೆಯಲ್ಲಿ ತರಬೇತಿ ನೀಡಿ ಎಂದು ಆಗ್ರಹಿಸಿದ್ದಾರೆ.
ಸಂಘದ ಅಧ್ಯಕ್ಷ ಸುರೇಶ ಶೆಡಶ್ಯಾಳ, ಕೋಶಾಧ್ಯಕ್ಷ ಹಾಗೂ ಉರ್ದು ಜಿಲ್ಲಾ ಶಿಕ್ಷಕ ಸಂಘದ ಅಧ್ಯಕ್ಷ ಸಯ್ಯದ ಜುಬೇರ ಕೆರೂರ, ಕಾರ್ಯದರ್ಶಿ ರುಕ್ಮುದ್ದೀನ ಕುಮಸಗಿ, ಬಸೀರ ನದಾಫ, ಗ್ರಾಮೀಣ ತಾಲೂಕು ಶಿಕ್ಷಕ ಸಂಘದ ಅಧ್ಯಕ್ಷ ಆರ್.ಅಂಗಡಿ, ಸರ್ತಾಜ ಬಗಲಿ, ಎ.ಆರ್.ಮಾಶ್ಯಾಳ, ಐ.ಎಚ್.ಅಬಜಲಪುರ, ಎಂ.ಆರ್.ಹುಣಸಗಿ, ಜಮೀರ ನಾಗರಬೌಡಿ, ಎಂ.ಆರ್.ಬೂದಿಹಾಳ, ಎ.ಎಸ್.ಚಡಚನಕರ, ಅಬ್ದುಲ ಇನಾಂದಾರ, ರಫೀಕ ಪಟೇಲ, ಸಾಜೀದ ಇನಾಂದಾರ, ಚಿಕ್ಕಅಗಸಿ, ಎ.ಕೆ.ಮುಲ್ಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.