ಅಂಡರ್-19 ರಾಜ್ಯ ಕ್ರಿಕೆಟ್ ತಂಡಕ್ಕೆ ಧಾರವಾಡದ ರೂಹಿ ಆಯ್ಕೆ
ಧಾರವಾಡ: ನಗರದ ರೂಹಿ ದೊಡ್ಡಮನಿ ಅಂಡರ್-19 ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಡಿ.13ರಿಂದ 21ರವರೆಗೆ ಹೈದರಾಬಾದ್‌ನಲ್ಲಿ ಬಿಸಿಸಿಐ ಆಯೋಜಿಸಿರುವ ‘ಅಂಡರ್ -19 ವುಮೆನ್ಸ್ ಡೇ ಟ್ರೋಫಿ’ ನಡೆಯುವ ಪಂದ್ಯಾವಳಿಯಲ್ಲಿ ರೂಹಿ ಭಾಗವಹಿಸಲಿದ್ದಾಳೆ.
ಇದಕ್ಕೂ ಮುನ್ನ ಕೆಎಸ್‌ಸಿಎ ಆಯೋಜಿಸುವ ಮಹಾರಾಣಿ ಟ್ರೋಫಿಯಲ್ಲಿ ಮಹಾರಾಜ ವಾರಿಯರ್ಸ್ ತಂಡಕ್ಕೆ ಆಯ್ಕೆಯಾಗಿದ್ದ ರೂಹಿ ಗಮನಾರ್ಹ ಸಾಧನೆ ಮಾಡಿದ್ದಳು.

ಧಾರವಾಡ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ರೂಹಿಗೆ ಜಗದೀಶ ತರಬೇತಿ ನೀಡಿದ್ದರು. ವಿದ್ಯಾರ್ಥಿನಿ ಸಾಧನೆಗೆ ಅಕಾಡೆಮಿ ಅಧ್ಯಕ್ಷ ಎಸ್.ಸಿ.ನೀಲಗುಂದ, ಗೌರವಾಧ್ಯಕ್ಷರು ಎಸ್.ಎಂ.ಅಗಡಿ ಅಭಿನಂದಿಸಿದ್ದಾರೆ.
