ಬಿಟ್ಟು ಹೋದ ಸತಿ ಬಳಿ ಬಂದಾಗ ಆತನಿದ್ದ: ತಡಮಾಡದೇ ಇರಿದೇ ಬಿಟ್ಟ ಪತಿ…!
1 min readಹುಬ್ಬಳ್ಳಿ: ಆತ ಹೆಂಡತಿಯನ್ನ ಬಿಟ್ಟು ಹೋಗಿ ಹತ್ತು ವರ್ಷಗಳಾಗಿತ್ತು. ಎಲ್ಲಿಗೆ ಹೋದ.. ಏನಾದ.. ಎಂಬುದು ಕೂಡಾ ಯಾರಿಗೂ ಗೊತ್ತೆಯಿರಲಿಲ್ಲ. ಆದರೆ, ಗಂಡ ಮರಳಿ ಬಂದು ನೋಡಿದಾಗ, ಪತ್ನಿಯ ಪಕ್ಕದಲ್ಲಿ ಮತ್ತೋಬ್ಬನಿದ್ದ. ಅಷ್ಟೇ.. ಪತಿ ಆತನಿಗೆ ಚಾಕುವಿನಿಂದ ಇರಿದುಬಿಟ್ಟಿದ್ದಾನೆ.
ಹೌದು.. ಇಂತಹದೊಂದು ಘಟನೆ ಉಣಕಲ್ ಗ್ರಾಮದ ಚೆಲವಾದಿ ಓಣಿಯಲ್ಲಿ ಸಂಭವಿಸಿದೆ. ಹನಮಂತ ಎಂಬಾತ ಕಳೆದ 10 ವರ್ಷದ ಹಿಂದೆ ಹೆಂಡತಿ ಮಕ್ಕಳನ್ನ ಬಿಟ್ಟು ಹೊರಟು ಹೋಗಿದ್ದ. ಎಷ್ಟೇ ಹುಡುಕಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೀಗ ಪ್ರತ್ಯಕ್ಷನಾಗಿದ್ದಾನೆ.
ಬಂದು ಮನೆಯಲ್ಲಿ ನೋಡಿದಾಗ ತನ್ನ ಪತ್ನಿ ನಿಂಗಪ್ಪ ಎಂಬಾತನೊಂದಿಗೆ ಜೀವನ ನಡೆಸುತ್ತಿದ್ದಾಳೆಂದು ಗೊತ್ತಾದ ತಕ್ಷಣವೇ, ನಿಂಗಪ್ಪನ ಹೊಟ್ಟೆಗೆ ಚಾಕು ಹಾಕಿದ್ದಾನೆ. ನಿಂಗಪ್ಪನಿಗೆ ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಅಲ್ಲಿಂದ ಪರಾರಿಯಾಗಿದ್ದಾನೆ.
ನಿಂಗಪ್ಪನ ಜೊತೆ ಜೀವನ ನಡೆಸುತ್ತಿರುವ ಹನಮಂತನ ಹೆಂಡತಿ ಮಕ್ಕಳೇ, ನಿಂಗಪ್ಪನನ್ನ ಕಿಮ್ಸಗೆ ತಂದು ಚಿಕಿತ್ಸೆಯನ್ನ ಕೊಡಿಸುತ್ತಿದ್ದು, ನಿಂಗಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪ್ರಕರಣ ವಿದ್ಯಾನಗರ ಠಾಣೆಯಲ್ಲಿ ದಾಖಲಾಗಿದೆ.