ಉಣಕಲ್ ರಸ್ತೆಯಲ್ಲಿ ಹತ್ತು ಅಡಿಯಾಳಕ್ಕೆ ಬಿದ್ದ ಟ್ರ್ಯಾಕ್ಟರ್: ಬದುಕುಳಿದ ಇಬ್ಬರು- ಮೇಲೆತ್ತಲು ಹರಸಾಹಸ
ಧಾರವಾಡ: ಶಿವಳ್ಳಿಯಿಂದ ಹುಬ್ಬಳ್ಳಿಗೆ ಹೋಗುವ ರಸ್ತೆಯಲ್ಲಿ ಬೋರವೆಲ್ ಎತ್ತಲು ಬಳಕೆಯಾಗುವ ಟ್ರ್ಯಾಕ್ಟರ್ ರಸ್ತೆ ಪಕ್ಕ ಗುಂಡಿಯಲ್ಲಿ ಮುಗುಚಿ ಬಿದ್ದ ಘಟನೆ ಇಂದು ಸಂಜೆ ನಡೆದಿದೆ.
ಹೆಬ್ಬಳ್ಳಿಯಿಂದ ಹುಬ್ಬಳ್ಳಿಗೆ ಹೊರಟಿದ್ದ ಟ್ರ್ಯಾಕ್ಟರನಲ್ಲಿ ಇಬ್ಬರಿದ್ದರು. ಎದುರಿಗೆ ಬಸ್ ಬಂದ ತಕ್ಷಣವೇ ಎಡಭಾಗಕ್ಕೆ ಹೊರಳಿಸುವಾಗ ರಸ್ತೆ ಕುಸಿದು ಟ್ರ್ಯಾಕ್ಟರ್ ಹತ್ತು ಅಡಿ ಆಳದಲ್ಲಿ ಬಿದ್ದಿದೆ. ತಕ್ಷಣವೇ ಜಾಗೃತರಾದ ಚಾಲಕ ಮತ್ತು ಆತನ ಗೆಳೆಯ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹತ್ತು ಅಡಿಯಾಳದಲ್ಲಿ ಬಿದ್ದ ಟ್ರ್ಯಾಕ್ಟರ್ ತೆಗೆಯಲು ಸುಮಾರು 2 ಗಂಟೆಗಳ ಕಾಲ ಹರಸಾಹಸ ಪಡಬೇಕಾಯಿತು. ಜೆಸಿಬಿ ತಂದು ಹಗ್ಗ ಕಟ್ಟಿ ಮೇಲಕ್ಕೆ ತೆಗೆಯುವ ಪ್ರಯತ್ನಕ್ಕೆ ಹಲವು ಬಾರಿ ತಡೆಯಾಯಿತು. ಕೊನೆಗೆ ಮತ್ತೊಂದಿಷ್ಟು ಹಗ್ಗವನ್ನ ಜೋಡಿಸಿ ಮೇಲಕ್ಕೆ ಎತ್ತುವ ಕಸರತ್ತು ನಡೆದಿತ್ತು. ಇದರಿಂದ ಕೆಲಕಾಲ ಈ ರಸ್ತೆಯ ಮೂಲಕ ಸಂಚರಿಸುವ ವಾಹಗಳಿಗೆ ತೊಂದರೆಯಾಯಿತು.