ಹುಬ್ಬಳ್ಳಿಯ “ಆ ವಾರ್ಡಿನ್” ಬಿಜೆಪಿ ಅಭ್ಯರ್ಥಿ ಹೆಂಗಿದ್ದಾರೆ ಗೊತ್ತಾ…!?
ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಒಟ್ಟು 82 ವಾರ್ಡುಗಳ ಪೈಕಿ ಅತಿ ವಿಶೇಷವಾದ ವಾರ್ಡಿನಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿರುವ ವ್ಯಕ್ತಿ ಹೇಗಿದ್ದಾರೆ ಎಂಬುದನ್ನ ನೀವು ತಿಳಿಯಲೇಬೇಕು. ಏಕೆಂದರೆ, ಅವರ ಎದುರಿಸುತ್ತಿರುವುದು ಮಾಜಿ ಮೇಯರ್ ಹಾಗೂ ಹಳೇಯ ತಲೆಮಾರಿನ ರಾಜಕಾರಣಿಯನ್ನ.
ಹೌದು.. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 52ನೇ ವಾರ್ಡಿನಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿರುವುದು ಉಮೇಶ ದುಶಿ. ಸದಾಕಾಲ ಎಲ್ಲರೊಂದಿಗೆ ಬೆರೆಯುತ್ತಲೇ ಸಾರ್ವಜನಿಕರಿಗೆ ಸಹಾಯ ಮಾಡುತ್ತ ಮೇಲೆ ಬಂದವರು.
ಎಬಿವಿಪಿಯಿಂದ ಬಂದ ಉಮೇಶ ದುಶಿಯವರು, ಭಾರತೀಯ ಜನತಾ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತ ಬಂದಿದ್ದಾರೆ. ಸಂಸದ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಹಾಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಪಕ್ಷದ ಪ್ರತಿ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಉಮೇಶ ದುಶಿಯವರು, ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮಕ್ಕಿದ್ದಾರೆ.
ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ ಕಾಂಗ್ರೆಸ್ ಪಕ್ಷದಿಂದ ಎದುರಾಳಿಯಾಗಿದ್ದರೂ, ಉಮೇಶ ದುಶಿಯವರ ಮಾನವೀಯ ಗುಣ ಪ್ರತಿಯೊಬ್ಬರನ್ನ ಆಕರ್ಷಣೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಇಂತವರಿಗೆ ಜನ ಬೆಂಬಲ ಸಿಕ್ಕು, ಪಾಲಿಕೆಗೆ ಬಂದರೇ ಒಳ್ಳೆಯದೆಂಬ ಭಾವನೆ ಮತದಾರರಲ್ಲಿ ಮೂಡಿದೆ.