ಉಕ್ರೇನ್ ದಲ್ಲಿ ಸಿಲುಕಿಕೊಂಡ ನವಲಗುಂದ ಬಲ್ಲರವಾಡದ ವಿದ್ಯಾರ್ಥಿನಿ…

ಕುಂದಗೋಳ: ರಷ್ಯಾ ದಾಳಿ ನಡೆಸುತ್ತಿರುವ ಉಕ್ರೇನ್ ದಲ್ಲಿ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ವಿದ್ಯಾರ್ಥಿನಿಯೋರ್ವಳು ಸಿಲುಕಿಕೊಂಡಿದ್ದು, ಪಾಲಕರು ಆತಂಕದಲ್ಲಿದ್ದಾರೆ.

ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಚೈತ್ರಾ ಎಂಬಾಕೆ ಉಕ್ರೇನ್ ದಲ್ಲಿ MBBS ಮೂರನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಕುಂದಗೋಳಕ್ಕೆ ಬರಲು ಸಿದ್ದವಾಗಿದ್ದ ಚೈತ್ರಾ ಅವರು, ಇದೀಗ ಉಕ್ರೇನ್ ಸರಕಾರದ ಅಧೀನದಲ್ಲಿ ಕ್ಷೇಮವಾಗಿದ್ದಾರೆ. ಮರಳಿ ಬರಲು ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿದ ಹಿನ್ನೆಲೆ ಪ್ರಯಾಣ ರದ್ದಾಗಿದೆ. ಪ್ರಯಾಣಿಕರಿಗೆ ಬಂಕರ್ ನಲ್ಲಿ ಉಳಿದುಕೊಳ್ಳಲು ಉಕ್ರೇನ್ ಸರ್ಕಾರ ವ್ಯವಸ್ಥೆ ಮಾಡಿದ್ದು, ಕುಟುಂಬದ ಸದಸ್ಯರ ಜೊತೆ ಚೈತ್ರಾ ನಿರಂತರ ಸಂಪರ್ಕದಲ್ಲಿದ್ದಾರೆಂದು ಗೊತ್ತಾಗಿದೆ.