ಆ ಪತ್ರಕರ್ತನ ಸ್ಥಿತಿ ಯಾರಿಗೂ ಬರೋದು ಬೇಡ: ಹಿಂಗೂ ಆಗ್ತದೆ ರಿಪೋರ್ಟರ್ ಸ್ಥಿತಿ
ಉತ್ತರಕನ್ನಡ: ಪತ್ರಕರ್ತ ಅಂದ್ರೇ ಸಾಕು, ‘ಅವನಿಗೇನು ಕಡಿಮೆ. ಸಿಕ್ಕಾಪಟ್ಟೆ ಬರತ್ತೆ’ ಅಂದುಕೊಳ್ಳೋರು ಈ ವರದಿಯನ್ನ ಓದಲೇಬೇಕು. ನಿಷ್ಠಾವಂತ ವರದಿಗಾರನ ನಿಜವಾದ ಸ್ಥಿತಿ ಏನಿರತ್ತೆ ಅನ್ನೋದು ಗೊತ್ತಾಗತ್ತೆ. ರಿಪೋರ್ಟರ್ ಆದಾತ ದಿನಬೆಳಗಾದರೇ, ಬೇರೆಯವರ ಮನೆಯವರು ಖುಷಿಯಿಂದ ಇರಲಿ ಎಂದು ಬಯಸುತ್ತಲೇ ಹೊರ ನಡೆಯುತ್ತಾನೆ. ಆದ್ರೇ, ತನ್ನ ಮನೆಯಲ್ಲಿ ಏನಾಗ್ತಿದೆ ಅನ್ನೋದು ಮಾತ್ರ ಅವನರಿವಿಗೆ ಇದ್ದರೂ ಸಹಿಸಿಕೊಂಡು ಹೋಗ್ತಾನೆ. ಅಂತಹದ್ದೇ ಕರುಣಾಜನಕ ವರದಿಯಿದು.
ಉತ್ತರಕನ್ನಡ ಜಿಲ್ಲೆಯ ಪವರ್ ಟಿವಿ ವರದಿಗಾರ ಉದಯ ಬರ್ಗಿಯ ವ್ಯತ್ಯೆಯ ಕಥೆಯಿದು. ದಿನಬೆಳಗಾದರೇ ಈತ ಕೊರೋನಾ ಸುದ್ದಿಯ ಬೆನ್ನತ್ತಿ ಅಲೆದಾಡುತ್ತಿರುತ್ತಾನೆ. ಆದರೆ, ಮಕ್ಕಳನ್ನ ಮುಟ್ಟೋಕೆ ಆಗಲ್ಲ, ಮಗ ಊರೆಲ್ಲ ತಿರುಗಾಡ್ತಾನೆ ನಮ್ಮ ಜೊತೇನಿ ಇರೀ ಎಂದು ಉದಯನ ಪಾಲಕರು ಮಕ್ಕಳನ್ನ ಕರೆದುಕೊಂಡು ಊರಿಗೆ ಹೋಗ್ತಾರೆ. ಉದಯ ಇಲ್ಲಿ ಒಬ್ಬಂಟಿ.
ಪತ್ನಿ ಹೇಮಾ ಕೂಡಾ ಕೊರೋನಾ ವಾರಿಯರ್. ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಇದೀಗ ನಿತ್ಯ ಕೆಲಸ. ಹೀಗಾಗಿ ಅವರು ಕೂಡಾ ಮನೆಗೆ ಬರೋದಿಲ್ಲ. ಉದಯ ಮತ್ತಷ್ಟು ಒಬ್ಬಂಟಿ. ಎರಡು ವರ್ಷದ ಮಗಳು ಧನ್ಯಾ, ಏಳು ವರ್ಷದ ಮಗ ಭೂವನ ತಂದೆ-ತಾಯಿ ಬಳಿ. ಉದಯ ಮಾತ್ರ ದಿನಬೆಳಗಾದರೇ ಅವರಿವರ ಪಾಲಕರ ನೋವನ್ನ ಸುದ್ದಿಯ ಮೂಲಕ ಕೊಟ್ಟು ತಾನೂ ಸದ್ದಿಲ್ಲದೇ ಕಣ್ಣೀರಾಗ್ತಾನೆ, ಯಾರಿಗೂ ಕಾಣದ ಹಾಗೆ.
ಹಣ ಮಾಡುವ ಗಲೀಜುತನ ಇದ್ದಿದ್ದರೇ ಉದಯ ಬರ್ಗಿ ಕೂಡಾ ಚೆನ್ನಾಗಿಯೇ ಇರುತ್ತಿದ್ದನೇನೋ. ಆದರೆ, ಉದಯ ಅಪ್ಪಟ ಗ್ರಾಮೀಣ ಪ್ರತಿಭೆ. ಬಡತನದಿಂದ ಬಂದಾತ. ಹತ್ತು ರೂಪಾಯಿ ಕೂಡಾ ಅನ್ಯಾಯವಾಗಿ ಪಡೆಯಬಾರದೆಂದು ವರದಿಗಾರನಾದವ. ಇಂತವನಿಗೆ ಕೊರೋನಾ ಇಂತಹ ಸ್ಥಿತಿಯನ್ನ ತಂದೋಡ್ಡಿದೆ.
ಇಷ್ಟೇಲ್ಲ ನೋವು ಅನುಭವಿಸುತ್ತಿರುವಾಗಲೇ ಕಾರವಾರದಲ್ಲಿಯೂ ಪತ್ರಕರ್ತ ಮಿತ್ರನೋರ್ವನಿಗೆ ಪಾಸಿಟಿವ್ ಬಂದಿದೆ. ಅಂದಿನಿಂದ ಇಂದಿನವರೆಗೆ ಉದಯ ಕೂಡಾ ಕ್ವಾರಂಟೈನ್‌ನಲ್ಲಿದ್ದಾನೆ. ಸಧ್ಯ ಅಡುಗೆಯನ್ನೂ ಕಲಿತು ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ಇದೇಲ್ಲವನ್ನೂ ಉದಯ ‘ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬಾ..’ ಎನ್ನುತ್ತಲೇ ಅನುಭವಿಸುತ್ತಿದ್ದಾನೆ.
ತಾನೊಂದು ಕಡೆ, ಮಕ್ಕಳೊಂದು ಕಡೆ, ಪತ್ನಿ ಮತ್ತೊಂದು ಕಡೆ…. ಛೇ… ಇಂತಹ ಸ್ಥಿತಿ ಬರಬಾರದಾಗಿತ್ತು ಅಲ್ವೇ… ಉದಯ ಬರ್ಗಿಯಂತ ವರದಿಗಾರರ ಸಂಖ್ಯೆ ಹೆಚ್ಚಾಗಲಿ. ಮಾನವೀಯ ಮೌಲ್ಯಗಳು ಹೀಗೆ ಉಳಿಯಲಿ.
ಆದಷ್ಟು ಬೇಗ ಈ ಕುಟುಂಬ ಒಂದೇ ಕಡೆ ಸೇರುವಂತಾಗಲಿ ಎಂದು ಕರ್ನಾಟಕ ವಾಯ್ಸ್ ಕೂಡಾ ಬಯಸುತ್ತ… ಉದಯ ನಿಂಗೆ ಒಳ್ಳೆಯದಾಗಲಿ… ಗುಡ್ ಲಕ್..