“ಉಜ್ಜಯಿನಿ ಪೀಠ” ಜಾತ್ರಾ ಮಹೋತ್ಸವದಲ್ಲಿ ಅಪಚಾರ: ಶಾಪ ಕಟ್ಟಿಟ್ಟ ಬುತ್ತಿ ಎಂದ ಜಗದ್ಗುರು…!!!

ಮಠದ ಪರಂಪರೆಯನ್ನ ಮರೆತ ಅನಧಿಕೃತ ಜಗದ್ಗುರು
ಅಧಿಕೃತ ಎಂದುಕೊಳ್ಳುವ ಜಗದ್ಗುರು ಹೇಳಿಕೆ
ಬಳ್ಳಾರಿ: ಉಜ್ಜಯಿನಿ ಜಾತ್ರಾ ಮಹೋತ್ಸವದಲ್ಲಿ ಅನಧಿಕೃತವಾಗಿ ಬಂದಿರುವ ಸ್ವಾಮೀಜಿಗಳು ನಿಯಮಗಳನ್ನ ಉಲ್ಲಂಘನೆ ಮಾಡಿದ್ದು, ಅವರಿಗೆ ಶಾಪ ತಟ್ಟದೇ ಇರದು ಎಂದು ಉಜ್ಜಯಿನಿ ಪೀಠದ ಜಗದ್ಗುರು ಎಂದು ಹೇಳಿಕೊಳ್ಳುವ ತ್ರಿಲೋಚನಾ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಮಠದ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ಹೇಳಿಕೆ ನೀಡಿರುವ ಸ್ವಾಮೀಜಿಗಳು, ಜಾತ್ರಾ ಮಹೋತ್ಸವದ ಸಮಯದಲ್ಲಿ ನಡೆದಿರುವ ಅಪಚಾರದ ಬಗ್ಗೆ ಹೇಳಿದ್ದು ಇಲ್ಲಿದೆ ನೋಡಿ…
ಪೀಠದಲ್ಲಿ ಇರುವ ಜಗದ್ಗುರು ಅಧಿಕೃತ ಅಲ್ಲವೆಂದಿರುವ ಸ್ವಾಮೀಜಿ, ಅಪಚಾರ ಮಾಡಿದವರಿಗೆ ಶಾಪ ತಗುಲತ್ತೆ. ಅದನ್ನ ಭಕ್ತರು ನೋಡಿಯೇ ನೋಡುತ್ತಾರೆ ಎಂದಿದ್ದಾರೆ.