ಉಡುಪಿಯಲ್ಲಿ 150 ಪಾಸಿಟಿವ್ ಪೈಕಿ 9ಜನ ಮಕ್ಕಳು: ಮಹಾರಾಷ್ಟ್ರದ ಲಿಂಕ್
ಉಡುಪಿ: ಜಿಲ್ಲೆಯಲ್ಲಿ ಇವತ್ತು 150 ಮಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದ್ದಾರೆ.
ಈತನಕ ಇನ್ನೂರು ಮುನ್ನೂರು ವರದಿಗಳು ಕೈ ಸೇರುತ್ತಿತ್ತು. ನಿನ್ನೆಯಿಂದ ದಿನಕ್ಕೆ ಎರಡು ಸಾವಿರದಷ್ಟು ವರದಿಗಳು ಬರುತ್ತಿವೆ. ಹಾಗಾಗಿ ಸಹಜವಾಗಿಯೇ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆ. ಯಾರೂ ಕೂಡ ಪ್ಯಾನಿಕ್ ಆಗುವ ಅಗತ್ಯ ಇಲ್ಲ. ಇವತ್ತು ಪಾಸಿಟಿವ್ ಬಂದ ಎಲ್ಲರೂ ಮಹಾರಾಷ್ಟ್ರದಿಂದ ಬಂದವರು. ಹತ್ತು ವರ್ಷದ ಒಳಗಿನ ಒಂಬತ್ತು ಮಕ್ಕಳೂ ಇದರಲ್ಲಿ ಸೇರಿದ್ದಾರೆ. ಜಿಲ್ಲೆಯಲ್ಲಿ 1120 ಸುಸಜ್ಜಿತ ಬೆಡ್ ವ್ಯವಸ್ಥೆ ಮಾಡಿದ್ದೇವೆ. ಜಿಲ್ಲೆಯ 410 ಸಕ್ರಿಯ ಸೋಂಕಿತರ ಪೈಕಿ ಎಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇಬ್ಬರಿಗೆ ಮಾತ್ರ ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಇವತ್ತು ಪಾಸಿಟಿವ್ ಕೇಸ್ ಬಂದ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡುತ್ತೇವೆ ಎಂದಿದ್ದಾರೆ.