ಚುನಾವಣೆಯಲ್ಲಿ ಡಿಕೆ ರವಿ ಪತ್ನಿ ಹೆಸರು: ಹೆತ್ತವ್ವ ಏನಂದಿದ್ದಾರೆ ಗೊತ್ತಾ..

ತುಮಕೂರು: ಆರ್.ಆರ್. ನಗರ ಉಪಸಮರದಲ್ಲಿ ಡಿಕೆ ರವಿ ಪತ್ನಿ ಕುಸುಮಾ ಅವರಿಗೆ ಕಾಂಗ್ರೆಸ್ ಟಿಕೆಟ್ ಸಾಧ್ಯತೆ ಹಿನ್ನೆಲೆಯಲ್ಲಿ ಡಿಕೆ ರವಿ ಕುಟುಂಬದಿಂದ ಭಾರಿ ವಿರೋಧ ವ್ಯಕ್ತವಾಗಿದೆ.
ಏನು ಮಾತಾಡಿದ್ದಾರೆ ನೋಡಿ.. ಡಿಕೆ ರವಿ ತಾಯಿ
ನನ್ನ ಮಗನ ಜೊತೆ ಅವಳೂ ಹೋಗಿಬಿಟ್ಲು ಅಂತಾ ತಿಳಿಕೊಂಡಿದ್ದೇನೆ ಎಂದು ಕುಣಿಗಲ್ ತಾಲೂಕಿನ ದೊಡ್ಡಕೊಪ್ಪಲಿನಲ್ಲಿ ಡಿಕೆ ರವಿ ತಾಯಿ ಗೌರಮ್ಮ ಹೇಳಿಕೆ ಕೊಟ್ಟಿದ್ದಾರೆ. ನನ್ನ ಮಗನ ದುಡ್ಡಲ್ಲಿ ಒಂದು ರೂಪಾಯಿನೂ ನಮ್ಮ ಕಷ್ಟಕ್ಕೆ ಕೊಡಲಿಲ್ಲಾ. ನನ್ನ ಮಗನ ಹೇಸರೇಳಿಕೊಂಡು ಯಾಕೆ ಚುನಾವಣೆಗೆ ನಿಂತ್ಕೋಬೇಕು? ಡಿಕೆ ರವಿ ಹೆಂಡ್ತಿ ಅನ್ನೋ ಯೋಗ್ಯತೆಯನ್ನು 6 ವರ್ಷಗಳಲ್ಲಿಯೇ ಕಳೆದುಕೊಂಡ್ಲು. ಚುನಾವಣೆ ನಿಂತ್ಕೊಂಡ್ರೂ ನನ್ನ ಮಗನ ಹೆಸ್ರು, ಪೋಟೋ ಹಾಕಬಾರದು. ಹಾಕಿಕೊಂಡ್ರೇ ನಾನೇ ಹೋಗಿ ಬೆಂಕಿ ಹಚ್ಚುತ್ತೇನೆ ಎಂದು ಡಿ.ಕೆ. ರವಿ ತಾಯಿ ಗೌರಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.