Posts Slider

Karnataka Voice

Latest Kannada News

ಜಿಲ್ಲೆಗೆ ಅನಧಿಕೃತ ಪ್ರವೇಶ: ಕಾರು, ಸ್ಕೂಟಿ ವಶ: ನಾಲ್ವರಿಗೆ ಐಸೋಲೇಷನ್ ಟ್ರಿಟ್ ಮೆಂಟ್

Spread the love

ತುಮಕೂರು: ಮೇ14 ರಂದು ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆಯ ಕನಕವಳ್ಳಿಯಿಂದ ಹುಳಿಯಾರಿಗೆ ಸರ್ಕಾರದ ಆದೇಶ ಪಾಲಿಸದೆ ಜಿಲ್ಲೆಗೆ ಮೂವರು ಆಗಮಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಬೆಳಗಾವಿಯ ನಿಪ್ಪಾಣಿಗೆ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಪ್ರಯಾಣ ಅಲ್ಲಿಂದ ಕಾರ್ ಮೂಲಕ ಹುಳಿಯಾರಿಗೆ ಪ್ರಯಾಣಿಸಿ, ನಂತರ ಮನೆಗೆ ಒಬ್ಬೊಬ್ಬರಾಗಿ ಸ್ಕೂಟಿಯಲ್ಲಿ ತಲುಪಿದ್ದಾರೆ. ಅಶೋಕ ಹೆಚ್. ಬಿ, ಮಲ್ಲಿಕಾರ್ಜುನ ಮತ್ತು ಚಂದ್ರಮೌಳಿ ಜಿಲ್ಲಾಡಳಿಕ್ಕೆ ಮಾಹಿತಿ ನೀಡದೆ ಪ್ರವೇಶ ಮಾಡಿರುವ ವ್ಯಕ್ತಿಗಳಾಗಿದ್ದಾರೆ. ಅಂತರ್ ರಾಜ್ಯ ಪ್ರಯಾಣಿಕರಾಗಿದ್ದು,ರಾಜ್ಯದಲ್ಲಿ ನಿಯಮ ಪಾಲಿಸದೇ ಪ್ರವೇಶ ಮಾಡಿರುವುದು ಕೂಡಾ ನಿಯಮಗಳ ಉಲ್ಲಂಘನೆ ಮಾಡಿದಂತಾಗಿದೆ. ತೀ ಹೆಚ್ಚು ಸೊಂಕಿತರಿರುವ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಪ್ರವೇಶ. ಮಾಡಿದ್ದರಿಂದ ಇವರ ಮೇಲೆ ಸೆಕ್ಷನ್ 269, 271 ಹಾಗೂ 51 (B)DM Act ರೀತ್ಯಾ ಕ್ರಮ ಜರುಗಿಸಿ ಪ್ರಯಾಣಕ್ಕೆ ಬಳಸಿದ ಕಾರು ಹಾಗೂ ಸ್ಕೂಟಿ ಸೇರಿ ಎರಡು ವಾಹನಗಳ ಸೀಜ್ ಮಾಡಲಾಗಿದೆ. ಕಾರು ಚಾಲಕ ಸೇರಿ 4 ಜನರನ್ನು ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಐಸೊಲೇಷನ್ ಮಾಡಲಾಗಿದ್ದು, ಜಿಲ್ಲೆಗೆ ಮಾಹಿತಿ ನೀಡದೆ ಬರುವ ಸಾರ್ವಜನಿಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್ ಪ್ರಕಟಣೆ ತಿಳಿಸಿದೆ.


Spread the love

Leave a Reply

Your email address will not be published. Required fields are marked *