ಸೋಂಕಿತರ ಸಂಪರ್ಕದಲ್ಲಿದ್ದವರೆಲ್ಲರನ್ನೂ ಕ್ವಾರಂಟೈನ್ ಮಾಡಿದ ತುಮಕೂರು ಜಿಲ್ಲಾಡಳಿತ

ತುಮಕೂರು: ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 11ಕ್ಕೇರಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಎಲ್ಲರಿಗೂ ಕ್ವಾರಂಟೈನ್ ಮಾಡಲಾಗಿದ್ದು, ಹೊರ ಜಿಲ್ಲೆ ಮತ್ತು ರಾಜ್ಯದಿಂದ ಬಂದವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ.
ಜಿಲ್ಲೆಗೆ ಹೊರ ರಾಜ್ಯದಿಂದ 289 ಮಂದಿ ಹಾಗೂ ಹೊರ ಜಿಲ್ಲೆಯಿಂದ 2711ಜನರ ಆಗಮನವಾಗಿದೆ ಎಂದು ತುಮಕೂರು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಮೇ 1ರಿಂದ ಜಿಲ್ಲೆಗೆ ಆಗಮಿಸಿದ ಹೊರ ಜಿಲ್ಲೆ ಮತ್ತು ರಾಜ್ಯದವರಿಗೆ ರೆಸಿಡೆನ್ಸಿಯಲ್ ಸ್ಕೂಲ್ ಮತ್ತು ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲೆಗೆ ಆಗಮಿಸುವವರಿಗಾಗಿ ಆಂಧ್ರ, ತೆಲಂಗಾಣ ಮತ್ತು ಪಾವಗಡ ಮೂಲಕ ಆಗಮಿಸುವವರಿಗೆ ಮಧುಗಿರಿಯಲ್ಲಿ ರಿಸಿವಿಂಗ್ ಪಾಯಿಂಟ್. ಉತ್ತರ ಕರ್ನಾಟಕದಿಂದ ಬರುವಂತಹವರಿಗೆ ಶಿರಾದಲ್ಲಿ ಎರಡನೇಯ ರಿಸಿವಿಂಗ್ ಪಾಯಿಂಟ್, ಹಾಗೇ ತಮಿಳುನಾಡು, ಬೆಂಗಳೂರಿಂದ ಬರುವವರಿಗೆ ನಗರದ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ರಿಸಿವಿಂಗ್ ಪಾಯಿಂಟ್ ಮಾಡಲಾಗಿದೆ.