ಚೀನಾಗೆ ಹೋಗುತ್ತಿದ್ದ ನಾರಿನ ವಸ್ತುಗೆ ಬೆಂಕಿ: ಕೋಟಿ ರೂಪಾಯಿ ನಷ್ಟ

ತುಮಕೂರು: ಡಿಸೆಂಬರ್ ನಲ್ಲಿ ಚೀನಾಗೆ ಹೋಗಬೇಕಿದ್ದ ನಾರಿನ ವಸ್ತುಗೆ ಬೆಂಕಿ ತಗುಲಿದ ಪರಿಣಾಮ ೊಂದು ಕೋಟಿ ರೂಪಾಯಿ ಮೌಲ್ಯದ ವಸ್ತು ಸಂಪೂರ್ಣ ಕರಕಲಾದ ಘಟನೆ ಗುಬ್ಬಿ ತಾಲೂಕಿನ ಅಡಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶ್ರೀ ವೆಂಕಟೇಶ್ವರ ತೆಂಗು ನಾರಿನ ಕೈಗಾರಿಕಾ ಘಟಕದಲ್ಲಿ ಘಟನೆ ನಡೆದಿದ್ದು, ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಕೊರೋನಾ ವೈರಸ್ ಚೀನಾದಲ್ಲಿ ಹೆಚ್ಚು ಹರಿಡಿದ್ದರಿಂದ ನಾರಿನ ವಸ್ತುವನ್ನ ಕಳಿಸಲು ಆಗಿರಲಿಲ್ಲ. ಹೀಗಾಗಿ ಘಟಕದಲ್ಲಿ ಉಳಿದಿತ್ತು. ವಿದ್ಯುತ್ ಅವಘಡ ಅದಲ್ಲೇವನ್ನೂ ಕರಕಲು ಮಾಡಿದೆ.