Karnataka Voice

Latest Kannada News

Big Impact: ಶಿಕ್ಷಣ ಇಲಾಖೆಯಲ್ಲಿ “ಜಾಂಡಾ” ಊರಿದವರ ವರ್ಗಾವಣೆ… ನಿರಂತರ ಫಾಲೋಅಪ್ ಮಾಡಿದ್ದ ಕರ್ನಾಟಕವಾಯ್ಸ್….!!!

Spread the love

ಧಾರವಾಡ: ಶಿಕ್ಷಣ ಇಲಾಖೆ ಅಪರ ಆಯುಕ್ತಾಲಯದಲ್ಲಿ ಕಳೆದ 10 ರಿಂದ 16 ವರ್ಷದ ವರೆಗೆ ಒಂದೇ ಕಡೆ ಸೇವೆ ಸಲ್ಲಿಸುತ್ತಿದ್ದ ಕೆಲ ಬೋಧಕೇತರ ನೌಕರರನ್ನು ತಾತ್ಕಾಲಿಕವಾಗಿ ಬೇರೆಡೆಗೆ ನಿಯೊಜಿಸುವ ಮೂಲಕ, ಸಭಾಪತಿ ಬಸವರಾಜ ಹೊರಟ್ಟಿಯವರ ಪತ್ರಕ್ಕೆ ಕೊನೆಗೂ ಮಾನ್ಯತೆ ನೀಡಿದಂತಾಗಿದೆ.

ಕರ್ನಾಟಕವಾಯ್ಸ್.ಕಾಂ ಕಳೆದ ಎರಡು ತಿಂಗಳಿಂದ ನಿರಂತರವಾಗಿ, ಶಿಕ್ಷಣ ಇಲಾಖೆಯ ಒಂದೇ ಕಚೇರಿಯಲ್ಲಿ ಏಳು ವರ್ಷಕ್ಕಿಂತ ಹೆಚ್ಚಿಗೆ ಸೇವೆ ಸಲ್ಲಿಸುತ್ತಿರುವ ಬೋಧಕೇತರ ನೌಕರರ ವರ್ಗಾವಣೆ ಕುರಿತು ಮಾಹಿತಿ ಹಂಚಿಕೊಂಡು, ಸಭಾಪತಿಯವರ ಪತ್ರದಂತೆ ಹಲವು ವರ್ಷಗಳಿಂದ ಒಂದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುವವರನ್ನು ಬೇರೆ ಜಿಲ್ಲೆಗೆ ವರ್ಗಾಯಿಸುವಂತೆ ನಿರಂತರವಾಗಿ ಶಿಕ್ಷಣ ಪ್ರೇಮಿಗಳ ನೋವನ್ನ ಹೊರಹಾಕಿತ್ತು.

ಈಗಲಾದರೂ ಎಚ್ಚೆತ್ತ ಅಧಿಕಾರಿಗಳು ಕೆಲವರನ್ನ ನಿಯೋಜನೆ ಆಧಾರದ ಮೇಲೆ ಬೇರೆ ಸ್ಥಳಗಳಿಗೆ ಆದೇಶ ಹೊರಡಿಸಿದ್ದಾರೆ.

ಏತನ್ಮಧ್ಯೆ, ಈಗ ನಿಯೋಜನೆಗೊಂಡ ಬೋಧಕೇತರ ನೌಕರರ ಹಾಗೂ ಇನ್ನೂ ಬೇರೆ ಕಚೇರಿಯಲ್ಲಿ ಏಳು ವರ್ಷಕ್ಕಿಂತ ಹೆಚ್ಚಿಗೆ ಸೇವೆ ಸಲ್ಲಿಸುತ್ತಿರುವ ನೌಕರ ವಿವರವನ್ನು, ಸಭಾಪತಿಯವರ ಪತ್ರದಂತೆ ಬೇರೆ ಜಿಲ್ಲೆಗೆ ವರ್ಗಾವಣೆಗಾಗಿ ಮುಖ್ಯಮಂತ್ರಿಯವರ ಅನುಮೋದನೆಗೆ ಸಲ್ಲಿಸಿ ತಕ್ಷಣವೇ ಬೇರೆ ಜಿಲ್ಲೆಗೆ ವರ್ಗಾಯಿಸಲು ಕ್ರಮಕೈಗೊಳ್ಳಬೇಕೆಂದು ಶಿಕ್ಷಣಾಸ್ತಕರು ಆಗ್ರಹಿಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *