ಟ್ರಾಫಿಕ್ ಪೊಲೀಸ್ರೂ ಏನೂ ಮಾಡಿದ್ರು ತಪ್ಪೇ..! ಹೆಂಗ್ ಡ್ಯೂಟಿ ಮಾಡಬೇಕರೀಪಾ..!

ಹುಬ್ಬಳ್ಳಿ: ಅವಳಿನಗರದ ಕೆಲವು ಪ್ರಮುಖ ಸ್ಥಳಗಳಲ್ಲಿ ಸಂಚಾರಿ ಠಾಣೆಯ ಪೊಲೀಸರು ಕರ್ತವ್ಯ ನಿರ್ವಹಣೆ ಮಾಡುವುದು ಬರ ಬರುತ್ತ ಸಾಕಷ್ಟು ತೊಂದರೆಯಾಗುತ್ತಿದೆ. ಸ್ವತಃ ಚಾಲಕರು ತಪ್ಪು ಮಾಡಿದ್ರೂ, ಸಂಚಾರಿ ಪೊಲೀಸರನ್ನೇ ಟಾರ್ಗೆಟ್ ಮಾಡುತ್ತಿರುವುದು ಹೆಚ್ಚಾಗುತ್ತಿರುವುದು, ಕೆಲವು ಇದ್ದುಳ್ಳ ಜನರಿಂದಲೇ ಎನ್ನುವುದನ್ನ ಬೇರೆ ಹೇಳಬೇಕಾಗಿಲ್ಲ. ಅದಕ್ಕೊಂದು ಉದಾಹರಣೆಯೂ ಇಲ್ಲಿದೆ ನೋಡಿ..
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಯಥಾ ಪ್ರಕಾರ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಆಟೋದವ ಸಡನ್ನಾಗಿ ರಿಕ್ಷಾವನ್ನ ನಿಲ್ಲಿಸಿದ್ದಾನೆ. ಅದರ ಹಿಂದೆ ಬರುತ್ತಿದ್ದ ಕಾರು ಅದಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಕೋಪಗೊಂಡ ಕಾರು ಮಾಲೀಕರು, ಆಟೋದವನ ಜೊತೆ ಮಾತನಾಡುವ ಬದಲು, ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು.
ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸ್ವಲ್ಪ ಡ್ಯಾಮೇಜ್ ಆಗಿದ್ದು, ಕಾರಿನಲ್ಲಿದ್ದ ಮಹಿಳೆಯರೋರ್ವರು ಪೊಲೀಸರೊಂದಿಗೆ ಕೆಲಕಾಲ ದೂಷಣೆ ಮಾಡಿದ್ರು. ಅಷ್ಟಾದರೂ, ಸುಮ್ಮನೆಯಿದ್ದ ಪೊಲೀಸರ ಭಾವಚಿತ್ರವನ್ನ ತೆಗೆಯಲು ಮುಂದಾದ ಘಟನೆಯೂ ನಡೆಯಿತು.
ಇದೇ ಸ್ಥಿತಿ ಮುಂದುವರೆಯಬಹುದೆಂಬ ಸಂಶಯದಿಂದ ಕಾರು ಚಾಲಕ ಹಾಗೂ ಮಹಿಳೆಯನ್ನ ಸಂಚಾರಿ ಠಾಣೆಗೆ ಕರೆದುಕೊಂಡು ಹೋಗಿ, ಅಪಘಾತಪಡಿಸಿದ್ದರ ಬಗ್ಗೆ ಕಾನೂನು ಕ್ರಮ ಜರುಗಿಸಿದ್ದಾರೆ.