ಸಂಚಾರಿ ಠಾಣೆಗೆ ನಾಗೇಶ ಕಾಡದೇವರಮಠ ‘ಓಓಡಿ’ ಇನ್ಸಪೆಕ್ಟರ್
1 min readಹುಬ್ಬಳ್ಳಿ: ಗೃಹ ಸಚಿವ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯಲ್ಲಿ ಪೊಲೀಸ್ ಠಾಣೆಗಳಲ್ಲಿ ಕೇವಲ ಓಓಡಿ, ಇನಜಾರ್ಜಗಳದ್ದೇ ಹೆಚ್ಚು ಕೆಲಸವಾಗುತ್ತಿದೆ. ಎಲ್ಲ ಠಾಣೆಗಳನ್ನೂ ಭರ್ತಿ ಮಾಡಲು ಇನ್ನೂ ಆಗದೇ ಇರುವುದು ಸೋಜಿಗ ಮೂಡಿಸುತ್ತಿರುವ ಬೆನ್ನಲ್ಲೇ ಮತ್ತೊಂದು ಠಾಣೆಗೆ ಓಓಡಿ ಇನ್ಸಪೆಕ್ಟರರನ್ನ ನೇಮಕ ಮಾಡಲಾಗಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸ ಕಮೀಷನರೇಟ್ ವ್ಯಾಪ್ತಿಯ ಮಾದಕ ವಸ್ತುಗಳ ಅಪರಾಧ ಠಾಣೆಯ ಇನ್ಸಪೆಕ್ಟರ್ ನಾಗೇಶ ಕಾಡದೇವರಮಠ ಅವರನ್ನ ಹೆಚ್ಚುವರಿಯಾಗಿ ಪೂರ್ವ ಸಂಚಾರಿ ಠಾಣೆಗೆ ಓಓಡಿ ಮೂಲಕ ನೇಮಕ ಮಾಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಇದೇ ಠಾಣೆಯ ಪಿಎಸೈ ದೇಸಾಯಿ ಇನಜಾರ್ಜ ವಹಿಸಿಕೊಂಡಿದ್ದರು.
ಅವಳಿನಗರದಲ್ಲಿ ಈಗಾಗಲೇ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಕೆ.ರಾಮರಾಜನ್ ಓಓಡಿ ಮೇಲೆ ಡಿಸಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವಳಿನಗರಕ್ಕೆ ಪೊಲೀಸ್ ಆಯುಕ್ತರಾಗಿ ಐಜಿಪಿ ರಾಘವೇಂದ್ರ ಸುಹಾಸ, ಪ್ರಭಾರಿಯಾಗಿದ್ದಾರೆ. ಮೊನ್ನೆ ಮೊನ್ನೆ ಸೈಬರ್ ಕ್ರೈಂ ಇನ್ಸಪೆಕ್ಟರ್ ಅವರನ್ನ ಎಪಿಎಂಸಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಇನ್ಸಪೆಕ್ಟರ್ ನಾಗೇಶ ಕಾಡದೇವರಮಠ, ಹುಬ್ಬಳ್ಳಿಯಲ್ಲಿ ಪಿಎಸೈ ಆಗಿಯೂ ಕಾರ್ಯ ನಿರ್ವಹಣೆ ಮಾಡಿದ್ದು, ಸ್ಥಳೀಯವಾಗಿ ಬಹುತೇಕ ಪ್ರದೇಶಗಳು ಗೊತ್ತಿದ್ದವೇ ಆಗಿವೆ. ನಗರದಲ್ಲೀಗ ಸಂಚಾರಿ ಠಾಣೆಯ ಜವಾಬ್ದಾರಿಯೂ ನಿಭಾಯಿಸಲು ಅಣಿಯಾಗಿದ್ದಾರೆ.