ಇದ್ದರೇ ಇಂತಹ ಪೊಲೀಸರಿಬೇಕು… ಹ್ಯಾಟ್ಸಾಪ್ ಸಂಚಾರಿ ಠಾಣೆ ಪೊಲೀಸರೇ…!
1 min readಧಾರವಾಡ: ಸಮಾಜದಲ್ಲಿ ಹಲವರು ಹಲವು ಕೆಲಸಗಳನ್ನ ಮಾಡುತ್ತಾರೆ. ಸಾವಿರಾರೂ ಜನರು ಸರಕಾರದ ಕೆಲಸ ದೇವರ ಕೆಲಸವೆಂದು ಗಿಂಬಳಕ್ಕಾಗಿ ಕೈ ಚಾಚುವುದನ್ನ ನಾವೂ ನೋಡಿದ್ದೇವೆ. ಆದರೆ, ನಾವೂ ಹೇಳಲು ಹೊರಟಿದ್ದು, ಸರಕಾರದ ಕೆಲಸವನ್ನ ದೇವರ ಕೆಲಸವೆಂದೂ ತಿಳಿದುಕೊಳ್ಳುವ ಜೊತೆಗೆ ಜೀವದ ಹಂಗು ತೊರೆದು ಕೆಲಸ ಮಾಡುವ ನೌಕರರು ಇದ್ದಾರೆ ಎನ್ನುವುದು. ಅದಕ್ಕೊಂದು ಸಾಕ್ಷಿಯಾಗಿರುವ ಮಾಹಿತಿಯನ್ನ ಕೊಡುತ್ತಿದ್ದೇವೆ.. ಪೂರ್ಣವಾಗಿ ಓದಿ..
ಈ ಜೆಸಿಬಿಯ ಮೇಲೆ ಕೂತವರಲ್ಲಿ ಒಬ್ಬರು ಪೊಲೀಸರು ಇದ್ದಾರೆ. ಸಾರ್ವಜನಿಕರಿಗೆ ಪದೇ ಪದೇ ಕಿರಿಕಿರಿಯಾಗುತ್ತಿರುವುದನ್ನ ತಪ್ಪಿಸಲು ತಾವೇ ಮುಂದೆ ನಿಂತು ಧಾರವಾಡದ ಹಳೇ ಡಿಎಸ್ ಪಿ ಸರ್ಕಲ್ಲಿನ ಸಿಗ್ನಲ್ ನ್ನ ಕಂಬವನ್ನ ನಿಲ್ಲಿಸಿದ್ದಾರೆ.
ಧಾರವಾಡ ಸಂಚಾರಿ ಠಾಣೆಯ ಲಿಂಗರಾಜ ನಾಯಕ, ಎಲ್.ಟಿ.ಲಮಾಣಿ, ಬಸು ಉಳ್ಳಿಗೇರಿ, ಶಂಕರ ಹೊಸಮನಿ ಹಾಗೂ ಮೋತಿಲಾಲ ಪವಾರ ಕೂಡಿಕೊಂಡು ಎಲ್ಲ ವ್ಯವಸ್ಥೆಯನ್ನ ಮಾಡಿದ್ದಾರೆ. ಸ್ಥಳೀಯವಾಗಿದ್ದವರ ಸಹಾಯ ಪಡೆದು, ತಾವೇ ಜೀವದ ಹಂಗು ತೊರೆದು ಕಾರ್ಯವನ್ನ ಸದ್ದಿಲ್ಲದೇ ಮಾಡಿಮುಗಿಸಿದ್ದಾರೆ.
ಇಂತಹ ಪೊಲೀಸರನ್ನ ಸರಿಯಾದ ಮಾರ್ಗದರ್ಶನದಲ್ಲಿ ತೆಗೆದುಕೊಂಡು ಹೋಗುತ್ತಿರುವ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಮಲ್ಲನಗೌಡ ನಾಯ್ಕರ ಕೂಡಾ, ಅಭಿನಂದನೆಗೆ ಅರ್ಹರು.
ಜನರ ಒಳಿತಿಗಾಗಿ ಇಂತಹ ಧೈರ್ಯವನ್ನ ಮಾಡಿ, ಸಂಚಾರ ಕಿರಿಕಿರಿಯನ್ನ ತಪ್ಪಿಸಲು ಮುಂದಾದ ಎಲ್ಲರಿಗೂ ಒಳ್ಳೆಯ ಮನಸ್ಸಿದ್ದವರೇ, ಒಂದು ಹ್ಯಾಟ್ಸಾಫ್ ಹೇಳಬೇಕಲ್ಲವೇ…!