ಶಿಕ್ಷಕರಿಗೆ ಪಾಠ ಮಾಡಿದ ಧಾರವಾಡ ಸಂಚಾರಿ ಠಾಣೆ ಪೊಲೀಸರು..!
1 min readಧಾರವಾಡ: ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರಿಗೆ ಪೊಲೀಸರು ಪಾಠ ಮಾಡಿ, ಅದನ್ನ ಸಮಾಜದ ಏಳಿಗೆಗಾಗಿ ಬಳಕೆ ಮಾಡಿಕೊಳ್ಳೋಣವೆಂದು ಪೊಲೀಸರು ಮನವಿ ಮಾಡಿಕೊಂಡರು.
ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ವಿಶೇಷ ಕಾರ್ಯಕ್ರಮವನ್ನ ಹಮ್ಮಿಕೊಂಡು ಜಾಗೃತಿ ಮೂಡಿಸುತ್ತಿದ್ದಾರೆ. ಪ್ರಮುಖ ಕಾಲೇಜುಗಳಲ್ಲಿ ನಿರಂತರವಾಗಿ ಶಿಕ್ಷಕರಿಗೆ ಸಂಚಾರಿ ನಿಯಮಗಳ ಬಗ್ಗೆ ಸಮಗ್ರವಾಗಿ ತಿಳಿಸುವ ಮೂಲಕ, ಹೊಸದೊಂದು ಆಯಾಮ ನೀಡಲು ಇಲಾಖೆ ಮುಂದಾಗಿದೆ.
ಹೆಚ್ಚೆಚ್ಚು ಶಿಕ್ಷಕರಿಗೆ ಸಂಚಾರಿ ನಿಯಮಗಳ ಬಗ್ಗೆ ತಿಳುವಳಿಕೆ ನೀಡುವುದರಿಂದ, ಅವರೆಲ್ಲರೂ ವಿದ್ಯಾರ್ಥಿಗಳಿಗೆ ಮಾಹಿತಿಯನ್ನ ರವಾನೆ ಮಾಡುತ್ತಾರೆ. ಇದರಿಂದ ಮತ್ತಷ್ಟು ಉಪಯೋಗವಾಗುವ ಸಾಧ್ಯತೆಯಿದೆ ಎನ್ನುವುದು ಪೊಲೀಸರ ನಂಬಿಕೆ.
ಇದೇ ಕಾರಣಕ್ಕೆ ಇಂದು ಎಎಸ್ಐ ಎಂ.ಎಸ್.ಕರಗಣ್ಣನವರ, ಲಿಂಗರಾಜ ನಾಯಕ, ಬಸಯ್ಯ ಹಿರೇಮಠ ಸೇರಿದಂತೆ ಹಲವರು ಶಿಕ್ಷಕರಿಗೆ ಸಂಚಾರಿ ನಿಯಮಗಳ ಬಗ್ಗೆ ತಿಳುವಳಿಕೆ ನೀಡಿ, ಪಾಲನೆ ಮಾಡುವಲ್ಲಿ ಸಹಕರಿಸಿ ಎಂದು ಮನವಿ ಮಾಡಿಕೊಂಡರು.