ನಸೆಯಲ್ಲಿ “ಸೇಪ್ಟಿ ಬ್ಯಾರಿಯರ್”ಗೆ ಗುಮ್ಮಿದ ಪೆಟ್ರೋಲಿಂಗ್ ವಾಹನ: ಹುಬ್ಬಳ್ಳಿ ಪೊಲೀಸ್ ರಕ್ತಸಿಕ್ತ… ಎಎಸ್ಐ ಸೇಫ್…

ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿದ್ದರೆನ್ನಲಾದ ಪೊಲೀಸ್ ನೋರ್ವ ಪೆಟ್ರೋಲಿಂಗ್ ವಾಹನವನ್ನ ರಸ್ತೆಯ ಸೇಪ್ಟಿ ಬ್ಯಾರಿಯರ್ ಗೆ ಡಿಕ್ಕಿ ಹೊಡೆದ ಘಟನೆ ತಾರಿಹಾಳದ ಬಳಿ ಈಗಷ್ಟೇ ಸಂಭವಿಸಿದೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಪೊಲೀಸ್ ರನ್ನ ಸಶಸ್ತ್ರ ಮೀಸಲು ಪಡೆಯ ಮುತ್ತು ಮಾಗಿ ಎಂದು ಗುರುತಿಸಲಾಗಿದೆ. ಜೊತೆಗಿದ್ದ ಉದಯ ದೊಡ್ಡಮನಿ ಎಂಬುವವರಿಗೆ ಯಾವುದೇ ಥರದ ಗಾಯಗಳಾಗಿಲ್ಲ. ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ಸಂಚಾರಿ ಠಾಣೆಯ ಎಎಸ್ಐ ಉದಯ ದೊಡ್ಡಮನಿ ಎಂಬುವವರೇ ಪೊಲೀಸ್ ಗೂ ಮದ್ಯ ಕುಡಿಸಿ ಕರೆದುಕೊಂಡು ಹೋಗಿದ್ದರೆಂದು ಹೇಳಲಾಗಿದೆ. ರಕ್ತಸಿಕ್ತಗೊಂಡಿದ್ದ ಪೊಲೀಸರನ್ನ ಕಿಮ್ಸಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.