ದಕ್ಷಿಣ ಸಂಚಾರಿ ಠಾಣೆ ಇನ್ಸಪೆಕ್ಟರ್ ತುರ್ತು ಸಭೆ… ಡ್ಯೂಟಿ ಬಿಟ್ಟು ಠಾಣೆಗೆ ಬಂದ ಸಿಬ್ಬಂದಿಗಳು…
1 min readಹುಬ್ಬಳ್ಳಿ: ತಮ್ಮ ಠಾಣೆಯ ಸಿಬ್ಬಂದಿಗಳ ಸಂಬಂಧಿಕರು ವರದಿಗಾರರಿದ್ದರೇ ಅವರ ಮಾಹಿತಿಯನ್ನ ಕೊಡುವಂತೆ ವಾಟ್ಸಾಫ್ ಗ್ರೂಫನಲ್ಲಿ ಹರಿದಾಡಿದ್ದ ಮಾಹಿತಿ ಹೊರ ಬೀಳುತ್ತಿದ್ದ ಹಾಗೇ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ಇನ್ಸಪೆಕ್ಟರ್, ತಮ್ಮೇಲ್ಲ ಸಿಬ್ಬಂದಿಗಳನ್ನ ಠಾಣೆಗೆ ಕರೆದು ಸಭೆ ನಡೆಸಲು ಮುಂದಾಗಿದ್ದಾರೆ.
ಕರ್ನಾಟಕವಾಯ್ಸ್.ಕಾಂ ನಲ್ಲಿ ಪತ್ರದ ಪ್ರತಿ ಹೊರ ಬಿದ್ದ ಕೆಲವೇ ಗಂಟೆಗಳಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಎಲ್ಲರನ್ನೂ ಕರೆದು ಸಭೆ ನಡೆಸಲಾಗುತ್ತಿದ್ದು, ಸಂಚಾರ ನಿಯಂತ್ರಣ ಮಾಡುವವರು ಯಾರೂ ಇಲ್ಲವಾಗಿದ್ದಾರೆ.
ಸಿಬ್ಬಂದಿಗಳ ಪತಿ/ಪತ್ನಿ ಸೇರಿದಂತೆ ಸಂಬಂಧಿಕರು ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದರೇ, ಅವರ ಮಾಹಿತಿಯನ್ನ ನೀಡುವಂತೆ ಪಿಐ ಅವರ ಆದೇಶವಿದೆ ಎಂದು ನೋಟೀಸ್ ನೀಡಿದ್ದ ಪ್ರಕರಣ ಗೊಂದಲಕ್ಕೆ ಕಾರಣವಾಗಿದೆ.
ಸ್ವಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೇ ನಡೆದುಕೊಳ್ಳುತ್ತಿರುವ ಪೊಲೀಸ್ ಇನ್ಸಪೆಕ್ಟರ್ ಮಳೆ ಬೀಳುವ ಸಮಯದಲ್ಲಿ ಪೊಲೀಸರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವುದು ಅವಶ್ಯಕವಿದೆ. ಆದರೆ, ಅವರೆಲ್ಲರನ್ನೂ ಠಾಣೆಗೆ ಕರೆಸಿಕೊಂಡು ಸಭೆ ನಡೆಸುತ್ತಿರುವುದು ಪೊಲೀಸ್ ಆಯುಕ್ತರ ಗಮನಕ್ಕೆ ಇದೇಯಾ ಎಂದು ನೋಡಬೇಕಿದೆ.