ಟ್ರಾಫಿಕ್ ಪೊಲೀಸ್ ಗೆ ಕೊರೋನಾ ಸೋಂಕು ದೃಢ: ದಾವಣಗೆರೆ ಎಸ್ಪಿ ಮಾಹಿತಿ

ದಾವಣಗೆರೆ: ಸಂಚಾರಿ ಠಾಣೆಯ ಪೇದೆಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನಮಂತರಾಯ ವಾಟ್ಸಾಫ್ ಗ್ರೂಫಗಳಲ್ಲಿ ವಿಷಯವನ್ನ ಬಹಿರಂಗ ಮಾಡಿದ್ದು, ದಾವಣಗೆರೆ ಜನರಲ್ಲಿ ಆತಂಕ ಹೆಚ್ಚಾಗಿಸಿದೆ.
ಪೊಲೀಸ್ ಇಲಾಖೆಯ ಅಧಿಕೃತ ವಾಟ್ಸಪ್ ಗ್ರೂಪ್ ನಲ್ಲಿ ಮಾಹಿತಿ ನೀಡಿರುವ ಎಸ್ಪಿ ಹನಮಂತರಾಯ, ಯಾವ ಯಾವ ಪ್ರದೇಶದಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆಂಬ ಬಗ್ಗೆ ನಿಖರವಾಗಿ ಮಾಹಿತಿಯನ್ನ ನೀಡಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಬೇಕಿದ್ದು, ಪೇದೆಯ ಟ್ರಾವೇಲ್ ಹಿಸ್ಟರಿ ಕೂಡಾ ಬಿಡುಗಡೆಯಾಗಬೇಕಿದೆ. ಪೇದೆಯ ಮಾಹಿತಿ ಹೊರಬಂದ ನಂತರ ಎಚ್ಚರಿಕೆಯಿಂದ ಇರುವಂತೆ ಸಿಬ್ಬಂದಿಗಳಿಗೆ ಎಸ್ಪಿ ಹನುಮಂತರಾಯ ಸೂಚನೆ ನೀಡಿದ್ದಾರೆ.