ಟೋಕಿಯೋ ಒಲಂಪಿಕ್ಸ್: ನಮಾಜ್ ಮಾಡುವವರಿಗೆ ವಿಶೇಷ ಬಸ್ ಸೌಲಭ್ಯ

ಟೋಕಿಯೊ: ಇದೇ ವರ್ಷದ ಜುಲೈನಲ್ಲಿ ನಡೆಯಲಿರುವ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಅಪೂರ್ಣಗೊಂಡಿರುವ ಕಾರ್ಯಗಳನ್ನ ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವ ಕಾರ್ಯವೂ ಸಮರೋಪಾದಿಯಲ್ಲಿ ನಡೆದಿದೆ. ಅದಕ್ಕೊಂದು ವಿಶೇಷ ಮೆರಗಾಗಲಿದೆ ಪ್ರಾರ್ಥನಾ ಬಸ್.
ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಸಾವಿರಾರೂ ಮುಸ್ಲಿಂ ಕ್ರೀಡಾಪಟುಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇದರ ಜೊತೆಗೆ ಲಕ್ಷಾಂತರ ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ. ಇದನ್ನ ಮನಗಂಡ ಆಡಳಿತ ಮಂಡಳಿ, ನಮಾಜ್ ಮಾಡಲು ವಿಶೇಷವಾದ ಬಸ್ ವಿನ್ಯಾಸ ಮಾಡುತ್ತಿದೆ. ಕೆಲವರು ನಮಾಜ್ ನ ರಸ್ತೆಯಲ್ಲೇ ಮಾಡುವುದರಿಂದವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಹೀಗಾಗಿ ವಿಶೇಷ ವಿನ್ಯಾಸದ ಬಸ್ ನಿರ್ಮಾಣ ಮಾಡಲಾಗುತ್ತಿದೆ.
ಜುಲೈ 9ರಿಂದ ಆರಂಭಗೊಳ್ಳಲಿರುವ ಈ ಕ್ರೀಡಾಕೂಟ ಆಗಸ್ಟ್ 9ರವರೆಗೆ ನಡೆಯಲಿದೆ. ಪ್ರಾರ್ಥನೆ ಸಲ್ಲಿಸುವುದಕ್ಕೆ ಬಸ್ ಹೊರತುಪಡಿಸಿ ರಾಜಧಾನಿಯ ಹೊಟೇಲ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವ್ಯವಸ್ಥೆ ಮಾಡಲು ಸಂಘಟನಾ ಸಮತಿ ನಿರ್ಧರಿಸಿದೆ.