ತಿಮ್ಮಪ್ಪನ ದರ್ಶನಕ್ಕೆ ಕ್ಷಣಗಣನೆ: ದಿನಕ್ಕೆ 6ಸಾವಿರ ಜನರಿಗೆ ಮಾತ್ರ ಅವಕಾಶ
ತಿರುಪತಿ: ಪ್ರಖ್ಯಾತ ದೇವಾಲಯಗಳಲ್ಲಿ ಒಂದಾದ ತಿರುಪತಿ ತಿರುಮಲ ದೇವಸ್ಥಾನ ಜೂನ್-11ರಿಂದ ಆರಂಭಗೊಳ್ಳುವುದಾಗಿ ದೇವಾಲಯದ ಆಡಳಿತ ಮಂಡಳಿ ಹೇಳಿದೆ.
ಈ ಸಂಬಂಧ ಈಗಾಗಲೇ ಭಕ್ತರಿಗೆ ದರ್ಶನ ಭಾಗ್ಯ ನೀಡುವ ಬಗ್ಗೆ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರತಿದಿನ 6ಸಾವಿರ ಭಕ್ತರಿಗೆ ದರ್ಶನ ನೀಡಲು ಆಡಳಿತ ಮಂಡಳಿ ವ್ಯವಸ್ಥೆ ಮಾಡುತ್ತಿದೆ. ಸೋಷಿಯಲ್ ಡಿಸ್ಟನ್ಸ್ ಮೂಲಕ ಶ್ರೀ ವೆಂಕಟೇಶ್ವರನ ಭಾಗ್ಯ ದೊರೆಯಲಿದೆ.