ಧಾರವಾಡದಲ್ಲಿ ನಿಲ್ಲದ ಮರಳು ದಂಧೆ…!
1 min readಧಾರವಾಡ: ಅವಳಿನಗರದ ಪೊಲೀಸ್ ಕಮೀಷನರ್ ಲಾಬುರಾಮ್ ಅವರ ಖಡಕ್ ವಾರ್ನಿಂಗ್ ನಡುವೆ ಧಾರವಾಡದಲ್ಲಿ ಅಕ್ರಮ ಮರಳು ದಂಧೆ ನಿರಾಂತಕವಾಗಿ ನಡೆದಿದ್ದು, ಕೆಲವು ಅಧಿಕಾರಿಗಳ ಕೃಪಾಕಟಾಕ್ಷಯಿದೆ ಎಂದು ಹೇಳಲಾಗುತ್ತಿದೆ.
ಧಾರವಾಡಕ್ಕೆ ಬರುವ ಲಾರಿಗಳು ಸರದಿ ಸಾಲಿನಲ್ಲಿ ರಸ್ತೆಯಲ್ಲೇ ನಿಲ್ಲುತ್ತಿದ್ದು, ಧಾರವಾಡ ನವಲಗುಂದ ರಸ್ತೆಯಲ್ಲಿ ಇವೇ ಟಿಪ್ಪರಗಳ ಹಾವಳಿ ಹೆಚ್ಚಾಗಿದೆ. ಬೇರೆ ವಾಹನಗಳು ಸಂಚಾರ ನಡೆಸುವುದು ಕೂಡಾ ತೊಂದರೆಯಾಗುತ್ತಿದೆ ಎಂದು ಈ ಭಾಗದಲ್ಲಿ ಸಂಚರಿಸುವ ಸವಾರರು ಹೇಳುತ್ತಿದ್ದಾರೆ.
ಇಲ್ಲಿ ನಿಲ್ಲುವ ಟಿಪ್ಪರಗಳಲ್ಲಿ ಪಾಸ್ ಗಳಲ್ಲಿ ಇರುವ ವೇಟ್ ಗಿಂತ ಹೆಚ್ಚಿನ ಮರಳು ಹೊಂದಿರುತ್ತವೆ. ಅಷ್ಟೇ ಅಲ್ಲ, ಪಾಸ್ ಗಳ ಸಮಯವೂ ಮುಗಿದು ಹೋಗಿರುತ್ತವೆ. ಇದನ್ನ ಕೇಳುವವರು ಯಾರೂ ಇಲ್ಲವೆನ್ನುವಂತಾಗಿದೆ.
ಧಾರವಾಡದ ಎಸಿಪಿ ಜೆ.ಅನುಷಾ ಅವರಿಗೆ ಇದೇಲ್ಲಾ ಗೊತ್ತಿಲ್ಲವೇ. ಕೆಲವು ಪೊಲೀಸ್ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆಂಬ ವದಂತಿಗಳಿವೆ, ಅದನ್ನ ತಪಾಸಣೆ ಮಾಡುವವರು ಯಾರು. ಅಕ್ರಮ ಮರಳು ದಂಧೆಯ ಹಿಂದೆ ಬೇರೆ ರೀತಿಯ ಒತ್ತಡಗಳಿವೇಯಾ.. ಎಂಬುದನ್ನ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಬೇಕಿದೆ.