ಅಯ್ಯೋ ದುರ್ವಿಧಿಯೇ… ಪಾದಚಾರಿಗಳ ಮೇಲೆಯೇ ಪಲ್ಟಿಯಾದ ಟಿಪ್ಪರ್… ಉಸಿರು ನಿಲ್ಲಿಸಿದ ಐವರು…!

ಯಮನಂತೆ ಮೇಲರಗಿದ ಮಣ್ಣು ತುಂಬಿದ ಟಿಪ್ಪರ್
ಮಣ್ಣಿನಲ್ಲಿ ಉಸಿರುಬಿಟ್ಟರು
ಬಾಗಲಕೋಟೆ: ಪಾದಚಾರಿಗಳ ಮೇಲೆ ಟಿಪ್ಪರ್ ಪಲ್ಟಿಯಾದ ಪರಿಣಾಮವಾಗಿ ಐವರು ದುರ್ಮರಣ ಹೊಂದಿರುವ ಘಟನೆ ಬೀಳಗಿ ತಾಲೂಕಿನ ಹೊನ್ಯಾಳ ಕ್ರಾಸ್‌ನಲ್ಲಿ ಸಂಭವಿಸಿದೆ. ಹೊಲದಲ್ಲಿನ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಪಾದಚಾರಿಗಳ ಮೇಲೆ ಟಿಪ್ಪರ ಪಲ್ಟಿಯಾಗಿದೆ. ಟಿಪ್ಪರ್ ಟಾಯರ್ ಬ್ಲಾಸ್ಟ ಆದ ಪರಿಣಮವಾಗಿ ದುರ್ಘಟನೆ ಜರುಗಿದೆ ಎನ್ನಲಾಗಿದೆ. ಈ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.
ಮೃತರನ್ನ ಯಂಕಪ್ಪ ಶಿವಪ್ಪ ತೋಳಮಟ್ಟಿ (70), ಯಲ್ಲವ್ವ ಯಂಕಪ್ಪ ತೋಳಮಟ್ಟಿ(ಪತ್ನಿ) (60), ಪುಂಡಲೀಕ್ ಯಂಕಪ್ಪ ತೋಳಮಟ್ಟಿ(ಮಗ)(35), ಅಶೋಕ ನಿಂಗಪ್ಪ ಬಮ್ಮಣ್ಣವರ(ಅಳಿಯ- ಮಗಳ ಗಂಡ) (50), ನಾಗವ್ವ ಅಶೋಕ ಬಮ್ಮಣ್ಣವರ( ಯಂಕಪ್ಪ ಅವರ ಮಗಳು)(45) ಎಂದು ಗುರುಸಲಾಗಿದೆ. ಬೀಳಗಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.