ಟೈಗರ್ ‘ಶ್ವಾನ’ ಮಾಡಿದ್ದೇನು.. ಪೊಲೀಸರು ಮೂರು ಸುತ್ತು ಗುಂಡು ಹಾರಿಸಿದ್ದು ಏಕೆ…ಎಕ್ಸಕ್ಲೂಸಿವ್ ವೀಡಿಯೋ..
ಧಾರವಾಡ: ಇಂತಹ ಘಟನೆಗಳು ನಡೆಯುವುದು ತೀರಾಅಪರೂಪ. ನೀವೂ ಯಾರಾದರೂ ಪೊಲೀಸರು ಮತ್ತು ವಿಐಪಿಗಳು ತೀರಿಕೊಂಡಾಗ ಇಂತಹ ದೃಶ್ಯ ಕಾಣಬಹುದೇ ಹೊರತು ಇನ್ನುಳಿದ ಸಮಯದಲ್ಲಿ ಕಾಣಲು ಆಗೋದೇ ಇಲ್ಲ. ಆದರೆ, ಇಲ್ಲೊಂದು ಶ್ವಾನಕ್ಕೆ ಸರಕಾರಿ ಗೌರವ ಸಲ್ಲಿಸಲಾಯಿತು. ಅದಕ್ಕೆ ಕಾರಣವೇನು ಗೊತ್ತಾ.. ಪೂರ್ಣ ವರದಿ ನೋಡಿ..
ಸುಮಾರು 8 ವರ್ಷಗಳಿಂದ ಅಪರಾಧ ವಿಭಾಗದಲ್ಲಿದ್ದ ಅತ್ಯುತ್ತಮ ಸೇವೆ ಸಲ್ಲಿಸಿದ್ದ ಶ್ವಾನಕ್ಕೆ ಟೈಗರ ಎಂದೇ ಹೆಸರಿಡಲಾಗಿತ್ತು. ಟೈಗರ್ ಹಲವು ಪ್ರಕರಣಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿ ಕೂಡಾ ಆಗಿತ್ತು. ಇಂತಹ ಶ್ವಾನ ಅನಾರೋಗ್ಯದಿಂದಾಗ ಸಾವನ್ನಪ್ಪಿದ್ದು, ಅದಕ್ಕಾಗಿಯೇ ಸರಕಾರಿ ಗೌರವ ನೀಡಲಾಯಿತು.
ಮೂರು ಸುತ್ತು ಗುಂಡು ಹಾರಿಸಿ, ಹೂಗುಚ್ಚದ ಮೂಲಕ ನಮನ ಸಲ್ಲಿಸಲಾಯಿತು. ಟೈಗರ್ ನ ಸಹಪಾಠಿಗಳಾದ ರಕ್ಷಾ, ರಿಂಕಿ ಕಣ್ಣೀರಾಗಿದ್ದರು. ಅಂತಹ ಮನಕಲುಕುವ ಘಟನೆಯೂ ನಡೆಯಿತು.
ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ನೇತೃತ್ವದಲ್ಲಿ ಡಿವೈಎಸ್ಪಿ ಶಿವಾನಂದ ಚನ್ನಬಸನ್ನವರ, ಇನ್ಸಪೆಕ್ಟರುಗಳಾದ ಜಿ.ಸಿ.ಡೂಗನವರ, ಮಂಜುನಾಥ ಕೆ, ಮಂಜುನಾಥ ಬಳಗಾನೂರ, ಜಿ.ಎಲ್.ಗೌಳಿ, ರಾಜು ಗುಡನಟ್ಟಿ ಚೆನ್ನಮ್ಮನವರ, ಶ್ವಾನದ ಹ್ಯಾಂಡ್ಲರಗಳಾದ ಮುಸ್ತಾಕ ಅಹಮದ ಗೋಕಾಕ, ಸಿ.ಎಸ್.ಕೊಣ್ಣೂರ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು, ಅಂತಿಮ ಗೌರವ ಸಲ್ಲಿಸಿದರು.