ಬುರಕಾ ಹಾಕಿಕೊಂಡು ಕಳ್ಳತನ: ಕುಮಾರ ಏನಿದು ಮರ್ಮ: ಪೊಲೀಸ್ ಅತಿಥಿಯಾದ ಚೋರ
ಹುಬ್ಬಳ್ಳಿ: ತಾನು ಪುರುಷ ಎಂದು ಗೊತ್ತಿದ್ದರೂ ಮಹಿಳೆಯಂತೆ ನಡಿಗೆಯನ್ನು ಕಲಿತು, ಯಾರೂ ಗುರುತಿಸಬಾರದೆಂದುಕೊಂಡು ಬುರಕಾ ಹಾಕಿಕೊಂಡು ಕಳ್ಳತನ ಮಾಡಲು ಹೋಗಿ ಸಿಕ್ಕುಬಿದ್ದ ಘಟನೆ ನಡೆದಿದೆ.
ಕುಮಾರ ಎಂಬ ಯುವಕ ಮುಸ್ಲಿಂ ಮಹಿಳೆ ಧರಿಸುವ ಬುರ್ಕಾ, ಹ್ಯಾಂಡ್‌ಗ್ಲೋಸ್ ಮತ್ತು ಕರಿಬಣ್ಣದ ಶೂ ಹಾಕಿಕೊಂಡು ಮೊಬೈಲ್ ಅಂಗಡಿಗೆ ತೆರಳಿದ್ದಾರೆ. ಎಲ್ಲ, ಐಫೋನ್ ಕದ್ದು ಮುಚ್ಚಿಟ್ಟುಕೊಳ್ಳುವಾಗ ಅಲ್ಲಿದ್ದವರಿಗೆ ಅನುಮಾನ ಬಂದಿದೆ. ತಕ್ಷಣವೇ ಸ್ಥಳೀಯರು ಚೆಕ್ ಮಾಡಿದಾಗ, ಬುರಕಾದಿಂದ ಕುಮಾರ ಹೊರಗೆ ಬಂದಿದ್ದಾನೆ. ಇದರಿಂದ ರೋಸಿ ಹೋದ ಜನ ಆತನಿಗೆ ಧರ್ಮದೇಟು ಕೊಡಲು ಮುಂದಾಗಿದ್ದಾರೆ. ಅಷ್ಟರಲ್ಲಿ ಪಿಎಸೈ ಹೂಗಾರ ಸ್ಥಳಕ್ಕೆ ಆಗಮಿಸಿ ಆರೋಪಿಯನ್ನ ಠಾಣೆಗೆ ಕರೆದೊಯ್ದಿದ್ದಾರೆ.
ಬುರಕಾ ಹಾಕಿಕೊಂಡು ಬೇರೆಯವರ ಮೇಲೆ ಸಂಶಯ ಬರುವಂತೆ ನಟಿಸುವ ಇಂಥವರಿಗೆ ತಕ್ಕ ಶಾಸ್ತಿ ಆಗಬೇಕಿದೆ.