“ಬಹುದೊಡ್ಡ ಬೇಟೆ” ಪೊಲೀಸರ ಕಾರ್ಯಾಚರಣೆಯ ಎಕ್ಸಕ್ಲೂಸಿವ್ ವೀಡಿಯೋ….

ಬೀಗ ಹಾಕಿ ಹೋಗಿದ್ದ ಹೆಡ್‌ಕಾನ್ಸಟೇಬಲ್ ಕುಟುಂಬ
ನಾಲ್ಕು ಕಳ್ಳರ ಪೈಕಿ, ಇಬ್ಬರು ಪರಾರಿ
ತುಮಕೂರು: ಹಾಡುಹಗಲೇ ಪೊಲೀಸ್ ಹೆಡ್‌ಕಾನ್ಸಟೇಬಲ್‌ವೊಬ್ಬರ ಮನೆಗೆ ಕನ್ನ ಹಾಕಿ, ಸಿಕ್ಕಿಬಿದ್ದ ಘಟನೆ ತುಮಕೂರು ಜಿಲ್ಲೆಯ ಶಿರಾ ನಗರದ ವಿದ್ಯಾನಗರದಲ್ಲಿ ಸಂಭವಿಸಿದೆ.
ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್ಸಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿರೋ ಮಹೇಶ್, ಎಂಬುವವರು ಮನೆ ಬಾಗಿಲು ಬೀಗ ಹಾಕಿಕೊಂಡು ಕುಟುಂಬ ಸಮೇತ ಹೊರಗೆ ಹೋದಾಗ ಘಟನೆ ನಡೆದಿದೆ.
ವೀಡಿಯೋ-1 exclusive
ಮನೆಗೆ ಬೀಗ ಹಾಕಿರೋದನ್ನ ಗಮನಿಸಿದ ಖದೀಮರು, ಮಾರಕಾಸ್ತ್ರಗಳ ಸಮೇತ ನುಗ್ಗಿದ್ದಾರೆ. ಒಂದು ಕಾರಿನಲ್ಲಿ ಬಂದಿದ್ದ ನಾಲ್ವರ ಪೈಕಿ ಇಬ್ಬರು ಮನೆಯೊಳಗೇ ನುಗ್ಗಿದ್ರೆ, ಮತ್ತಿಬ್ಬರು ಮನೆ ಹೊರಗಡೆ ವಾಚ್ ಮಾಡ್ತಿದ್ರು. ಖದೀಮರ ಚಲನವಲನ ಗಮನಿಸಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಪೊಲೀಸರು ಆಗಮಿಸಿದ ವೇಳೆ ಮನೆಯ ಹೊರಗೆ ಕಾರಿನಲ್ಲಿ ಕುಳಿತಿದ್ದ ಇಬ್ಬರು ಖದೀಮರು ಎಸ್ಕೇಪ್ ಆಗಿದ್ದು, ಮನೆಯೊಳಗಿದ್ದ ಇಬ್ಬರನ್ನ ಸೀನಿಮಿಯ ರೀತಿಯಲ್ಲಿ ಸೆರೆ ಹಿಡಿಯಲಾಗಿದೆ.
ಈ ವೇಳೆ ಪೋಲೀಸರ ಮೇಲೆಯೇ ಡ್ರ್ಯಾಗರ್ ನಿಂದ ಕಳ್ಳರು ಶಿರಾ ನಗರ ಪೊಲೀಸ್ ಠಾಣೆಯ ಕ್ರೈಂ ಸಿಬ್ಬಂದಿ ಧರ್ಮೇಶ್ ಮತ್ತು ಖಲೀಲ್ ಹಲ್ಲೆಗೆ ಯತ್ನಿಸಿದ್ದಾರೆ.
ವೀಡಿಯೋ-2 exclusive
ಇದೇ ವೇಳೆ ತಾನೇ ಚಾಕುವಿನಿಂದ ಚುಚ್ಚಿಕೊಂಡು ಖದೀಮನೋರ್ವ ಹೈಡ್ರಾಮಾ ಸೃಷ್ಟಿಸಿದ್ದಾನೆ. ಬಳಿಕ ರಿಯಾದ್ ಮತ್ತು ಖಾಲಿದ್ ಎಂಬ ಇಬ್ಬರು ಖದೀಮರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿಗೆ ಶಿರಾ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಶಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.