ಮಾರಡಗಿಯಲ್ಲಿ “ಅಹೋರಾತ್ರಿ ಕಳ್ಳರಾಟ”- 5ಮನೆಗಳಿಗೆ ಕನ್ನ: ಸಿಸಿಟಿವಿ ದೃಶ್ಯಾವಳಿ ವೈರಲ್…

ಧಾರವಾಡ: ಬರಗಾಲದಲ್ಲಿ ಬೆಂದಿರುವ ಗ್ರಾಮೀಣ ಪ್ರದೇಶಗಳಲ್ಲಿ ಕಳ್ಳರ ಹಾವಳಿ ಆರಂಭವಾಗಿದ್ದು, ಧಾರವಾಡ ತಾಲೂಕಿನ ಮಾರಡಗಿಯಲ್ಲಿ ಒಂದೇ ರಾತ್ರಿ ಐದು ಮನೆಗಳ ಕಳ್ಳತನ ಮಾಡಿದ್ದಾರೆ.
ಮೂವರು ಆರೋಪಿಗಳು ಹೆಗಲಿನಲ್ಲಿ ವಿವಿಧ ರೀತಿಯ ವಸ್ತುಗಳನ್ನು ಹಾಕಿಕೊಂಡು ಬಂದಿದ್ದು, ಮಾರಡಗಿಯಲ್ಲಿನ ದೃಶ್ಯಾವಳಿಗಳು ಇದೀಗ ವೈರಲ್ ಆಗಿವೆ.
ಎಕ್ಸಕ್ಲೂಸಿವ್ ದೃಶ್ಯಾವಳಿಗಳು ಇಲ್ಲಿವೆ ನೋಡಿ…
ಒಂದು ಮನೆಯಲ್ಲಿ ಲಕ್ಷ ರೂಪಾಯಿ ಲೂಟಿ ಮಾಡಲಾಗಿದೆ. ಕೀಲಿ ಹಾಕಿರುವ ಮನೆಯನ್ನೇ ಟಾರ್ಗೆಟ್ ಮಾಡಿರುವ ಚೋರರು, ಹಲವು ವಸ್ತುಗಳನ್ನು ದೋಚಿದ್ದಾರೆ.