ಕುಂದಗೋಳದ ಮಸಾರಿ ಪ್ಲಾಟ್‌ನಲ್ಲಿ ಹಾಡುಹಗಲೇ ಕಳ್ಳತನ- ಲಕ್ಷಾಂತರ ರೂ. ನಗದು, ಚಿನ್ನ ಲೂಟಿ…

ಮನೆ ದರೋಡೆ 2.50 ಲಕ್ಷ ನಗದು ಹಾಗೂ 10 ತೊಲೆ ಬಂಗಾರ ದೋಚಿದ ದುಷ್ಕರ್ಮಿಗಳು
ಕುಂದಗೋಳ: ಹಾಡುಹಗಲೇ ಮನೆಯೊಂದರ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ಕುಂದಗೋಳ ಪಟ್ಟಣದ ಮಸಾರಿ ಪ್ಲಾಟ್’ನಲ್ಲಿ ನಡೆದಿದೆ.
ಕುಂದಗೋಳದ ಮಸಾರಿ ಪ್ಲಾಟ್ ನಿವಾಸಿ ಅಲ್ಲಾವುದ್ದೀನಸಾಬ ಹುಸೇನಸಾಬ ಕಳ್ಳಿಮನಿ ಎಂಬುವವರ ಮನೆಗೆ ದುಷ್ಕರ್ಮಿಗಳು ಹಾಡುಹಗಲೇ ನುಗ್ಗಿದ್ದಾರೆ. ಮಗಳ ಮದುವೆಗಾಗಿ ಮನೆಯಲ್ಲಿಟ್ಟಿದ್ದ 2.50 ಲಕ್ಷ ರೂಪಾಯಿ ನಗದು ಹಣ, 10 ತೊಲೆ ಚಿನ್ನ ಎಗರಿಸಿಕೊಂಡು ಪರಾರಿಯಾಗಿದ್ದಾರೆ.
ವೀಡಿಯೋ…
ಕಳ್ಳಿಮನಿ ಕುಟುಂಬದವರು ಮನೆಗೆ ಬೀಗ ಹಾಕಿ ಮುಂಡಗೋಡಕ್ಕೆ ತೆರಳಿದ ವೇಳೆ ಮನೆ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳರು, ಅಲ್ಮೇರಾ ತೆರೆದು ಹಣ, ಬಂಗಾರ ದೋಚಿದ್ದಾರೆ.
ಘಟನಾ ಸ್ಥಳಕ್ಕೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ಇಮ್ರಾನ ಪಠಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬೆರಳಚ್ಚು ತಜ್ಞರು ಮತ್ತು ಶ್ವಾನದಳದ ಮೂಲಕ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.