ನೀವೂ ಟಿಇಟಿ ಪರೀಕ್ಷೆಗಾಗಿ ಧಾರವಾಡಕ್ಕೆ ಬರ್ತೀದ್ದೀರಾ.. ನಿಮಗೆ ಉಚಿತ ವಸತಿ ಕೊಡ್ತಾರೆ..!
ಧಾರವಾಡ: ಕೊರೋನಾ ಮಹಾಮಾರಿಯ ನಡುವೆಯೂ ನಡೆಯುತ್ತಿರುವ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಧಾರವಾಡಕ್ಕೆ ಆಗಮಿಸುವ ಪ್ರತಿಯೊಬ್ಬ ಪರೀಕ್ಷಾರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡಲು ಪ್ರೋಪೆಸರ್ ಈಶ್ವರ ಸಾತಿಹಾಳ ಮುಂದಾಗಿದ್ದಾರೆ.
ರಾಜ್ಯದ ಯಾವುದೇ ಮೂಲೆಯಿಂದ ಧಾರವಾಡಕ್ಕೆ ಬಂದರೂ ಅವರಿಗೆ ವಸತಿ ಜೊತೆಗೆ ರಾತ್ರಿಯ ಊಟವನ್ನ ಕೊಡಲಾಗುವದೆಂದು ತಿಳಿಸಿದ್ದಾರೆ. ಇಂದು ಸಂಜೆ 5ಗಂಟೆಯಿಂದ ರಾತ್ರಿ 9ಗಂಟೆಯೊಳಗೆ ಬರಬಹುದೆಂದು ತಿಳಿಸಿದ್ದಾರೆ.
ಈ ವ್ಯವಸ್ಥೆ ಪಡೆಯಲು ದೂರವಾಣಿ ಸಂಖ್ಯೆಗಳನ್ನೂ ನೀಡಿದ್ದು, ಟಿಇಟಿ ಬರೆಯೋರು ಇದರ ಪ್ರಯೋಜನ ಪಡೆಯಬಹುದಾಗಿದೆ.

