ತೇಜಸ್ವಿ ಸೂರ್ಯ ನೋಡಿದಾಗ ಮಾತೃತ್ವ ಉಕ್ಕಿಬರತ್ತೆ: ಅಮಿತಾ ಪಾಂಡೆ

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ‘ರಾಷ್ಟ್ರೀಯ ಯುವಮೊರ್ಚಾ ಅಧ್ಯಕ್ಷ ಪದವಿ ಅಲಂಕರಿಸಿದ ಸಲುವಾಗಿ ‘ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಜನಾ ಪ್ರಚಾರ ಪ್ರಸಾರ ಅಭಿಯಾನ’ದ ವತಿಯಿಂದ ಸನ್ಮಾನಿಸಲಾಯಿತು.
ಈ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ, ರಾಷ್ಟ್ರೀಯ ಪದಾಧಿಕಾರಿಗಳು ಹಾಜರಿದ್ದರು. ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ತೇಜಸ್ವಿ ಸೂರ್ಯ “ನನ್ನ ಮೇಲೆ ವಿಶ್ವಾಸವಿಟ್ಟು, ರಾಷ್ಟ್ರೀಯ ಜವಾಬ್ದಾರಿಯನ್ನು ನೀಡಿದ ಪಕ್ಷದ ವರಿಷ್ಠರಿಗೆ ಮತ್ತು ಈ ಸಂದರ್ಭದಲ್ಲಿ ನನ್ನನ್ನು ಸನ್ಮಾನಿಸುತ್ತಿರುವ ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಜನ ಪ್ರಚಾರ ಪ್ರಸಾರ ಅಭಿಯಾನದ ಎಲ್ಲ ಪದಾಧಿಕಾರಿಗಳೂ ಹಾಗೂ ಸದಸ್ಯರಿಗೆ ಧನ್ಯವಾದ ಹೇಳುತ್ತಿದ್ದೇನೆ”.
ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಗಳನ್ನು ಸಮಾಜದ ತಳಮಟ್ಟದ ಪ್ರಜೆಯ ವರೆಗೆ ಮುಟ್ಟಿಸುವ ಅದಮ್ಯ ಜವಾಬ್ದಾರಿ ‘ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಜನಾ ಪ್ರಚಾರ ಪ್ರಸಾರ ಅಭಿಯಾನ’ದ ಹೆಗಲ ಮೇಲಿದೆ ಈ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಎಂದು ಶುಭ ಕೋರಿದರು.
ಈ ಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಜನಾ ಪ್ರಚಾರ ಪ್ರಸಾರ ಅಭಿಯಾನದ ರಾಜ್ಯ ಅಧ್ಯಕ್ಷ ಅಮಿತಾ ಪಾಂಡೆ, “ತೇಜಸ್ವಿ ಸೂರ್ಯರವರನ್ನು ನೋಡಿದಾಗ ನನ್ನ ಮಾತೃತ್ವ ಉಕ್ಕಿಬರತ್ತೆ, ಇಂಥ ಮಗನನ್ನು ಪಡೆದ ತೇಜಸ್ವಿಯವರ ತಾಯಿ ನಿಜಕ್ಕೂ ಪುಣ್ಯವಂತರು, ಇವರ ಉತ್ಸಾಹ ನೇರನುಡಿ ಮತ್ತು ನಾಯಕತ್ವದ ಗುಣಗಳನ್ನು ನೋಡುತ್ತಿದ್ದಾರೆ, ಭವಿಷ್ಯದಲ್ಲಿ ಇವರನ್ನು ಇನ್ನೂ ಅತಿದೊಡ್ಡ ಸ್ಥಾನದಲ್ಲಿ ನೋಡಬೇಕೆನ್ನುವ ಆಶಯ ಮೂಡುತ್ತಿದೆ. ಭಾರತಾಂಬೆಯ ಎಲ್ಲ ಕೃಪಾರ್ಶಿವಾದ ತೇಜಸ್ವಿ ಸೂರ್ಯ ರವರ ಮೇಲಿರಲಿ ಮತ್ತು ಅವರು ರಾಷ್ಟ್ರಮಟ್ಟದಲ್ಲಿ ಇನ್ನೂ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿ ತಮ್ಮ ಕ್ಷೇತ್ರ ಮತ್ತು ಕ್ಷೇತ್ರದ ಜನರ ಅಭಿವೃದ್ಧಿಗೆ ಒತ್ತಾಸೆಯಾಗಲಿ ಎಂದು ಹಾರೈಸುತ್ತೇನೆ” ಎಂದರು.
ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಜನ ಪ್ರಚಾರ ಪ್ರಸಾರ ಅಭಿಯಾನದ ರಾಷ್ಟ್ರೀಯ ಅಧ್ಯಕ್ಷ ಪುಶೇಷ್ ಆತ್ರೇಯ, ರಾಷ್ಟೀಯ ಸಂಘಟನ ಕಾರ್ಯಕಾರಿ ಶಶಾಂಕ್ ಚೋಪಡ, ರಾಷ್ಟ್ರೀಯ ಪದಾಧಿಕಾರಿಗಳು ಮತ್ತು ಸದಸ್ಯರು ವೀಡಿಯೋ ಕಾನ್ಫರೆಂಸ್ ಮೂಲಕ ಹಾಜರಿದ್ದರು. ರಾಜ್ಯದ ಸಂಘಟನಾ ಕಾರ್ಯಕಾರಿ ದಿನೇಶ್ ಹರ‍್ದಿಕ್ ಪಟೇಲ್, ಕಾರ್ಯದರ್ಶಿ ಭರತ್‌ಕುಮಾರ್, ಯುವಾಧ್ಯಕ್ಷ ಕೌಶಲ್ ಜೈನ್, ಐ.ಟಿ. ಸೆಲ್ ಮುಖ್ಯಸ್ಥ ಲಲಿತ್ ಡಾಖಾಲಿಯಾ, ಗ್ರಾಮಾಂತರ ಅಧ್ಯಕ್ಷರಾದ ರಘುಪತಿ ನಾಯ್ಡು, ಬೆಂಗಳೂರು ಗ್ರಾಮಾಂತರದ ಸದಸ್ಯ ವಿವೇಕ್ ಸಿಂಗ್ ಮತ್ತು ಮಾಧ್ಯಮ ಸದಸ್ಯ ಮುರಳಿ ಸಭೆಯಲ್ಲಿ ಉಪಸ್ಥಿತರಿದ್ದರು.