ದಕ್ಷಿಣ ವಿಭಾಗದ ಟೆಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ಚಿಣ್ಣರು

ಧಾರವಾಡ: ಇದೇ ಜನೇವರಿ 12 ರಂದು ಬೆಂಗಳೂರಿನಲ್ಲಿ ನಡೆದ 3ನೇ ಆವೃತ್ತಿಯ ದಕ್ಷಿಣ ವಿಭಾಗದ ಟೆಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಧಾರವಾಡದ ಚಿಣ್ಣರು ಚಿನ್ನ ಹಾಗೂ ಬೆಳ್ಳಿ ಪದಕವನ್ನು ಗಳಿಸಿದ್ದಾರೆ. ಅನಿಕಾ, ಅಮೀರ್,ಸಿದ್ದಾರ್ಥ, ಹಾಗೂ ಆಕಾಂಕ್ಷಾ ಕ್ಯೂರೋಗಿಯಲ್ಲಿ ಚಿನ್ನ ಹಾಗೂ ಪೋಮಸೈನಲ್ಲಿ ಕಂಚಿನ ಪದಕಗಳನ್ನು ಪಡೆದರೆ. ಐರೇಶ್ ಕ್ಯೂರೋಗಿಯಲ್ಲಿ ಬೆಳ್ಳಿ ಹಾಗೂ ಪೋಮಸೈನಲ್ಲಿ ಕಂಚನ್ನು ಪಡೆದು ನಗರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಎಂದು ಕೋಚ್ ಯಲ್ಲಪ್ಪ ಹುಲ್ಲೂರ್ ತಿಳಿಸಿದ್ದಾರೆ.