Posts Slider

Karnataka Voice

Latest Kannada News

ಆಡಳಿತ ಯಂತ್ರಕ್ಕೆ ಪರೋಕ್ಷವಾಗಿ ಸಹಕಾರ ನೀಡುವ ಸಂಘಗಳ ನಿರ್ಬಂಧ: ಯಾವ ನ್ಯಾಯ ಸ್ವಾಮಿ..!

1 min read
Spread the love

ಹುಬ್ಬಳ್ಳಿ: ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮಾನ್ಯತೆ ಇಲ್ಲದ ಸರಕಾರಿ ನೌಕರರ ಸೇವಾ ಸಂಘಗಳನ್ನ ನಿರ್ಬಂಧ ಮಾಡಲು ಮುಂದಾಗಿರುವ ಕ್ರಮವನ್ನ ತಕ್ಷಣವೆ ಹಿಂದೆ ಪಡೆಯಬೇಕೆಂದು ಕರ್ನಾಟಕ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಮಾಡಿಕೊಂಡಿದ್ದಾರೆ.

ಮನವಿ ಇಂತಿದೆ..

ಗೆ

ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾನ್ಯ ಮುಖ್ಯಮಂತ್ರಿಗಳು

ಕರ್ನಾಟಕ ಸರ್ಕಾರ ವಿಧಾನ ಸೌಧ. ಬೆಂಗಳೂರು 01

ಮಾನ್ಯರೆ

ವಿಷಯ:- ಸರ್ಕಾರಿ ನೌಕರರ ಸೇವಾ ಸಂಘಗಳಿಗೆ ಮಾನ್ಯತೆಗೆ ಸಂಬಂಧಿಸಿದಂತೆ ಸಿ ಆ ಸು ಇ (ಸೇಸವಿ) ಇವರ ಸುತ್ತೋಲೆ ದಿನಾಂಕ 18-01-2021ನ್ನು ಪುನರ್ ಪರಿಶೀಲಿಸುವಂತೆ ಸೂಚಿಸಲು ಮನವಿ

ಉಲ್ಲೇಖ :- ಮಾನ್ಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-ವಿಶೇಷ ಕೋಶ)ಇವರ ಸುತ್ತೋಲೆ ಸಂಖ್ಯೆ ಸಿ ಆ ಸು ಇ 6 ಸೇಸವಿ 2013 ದಿನಾಂಕ 18-01-2021

ಮೇಲ್ಕಾಣಿಸಿದ ‌ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ರಿ ಹುಬ್ಬಳ್ಳಿಯ ರಾಜ್ಯಾಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಈ ಮೂಲಕ ತಮ್ಮಲ್ಲಿ ವಿನಂತಿಸುವುದೇನೆಂದರೆ ದಿನಾಂಕ 18-01-2021 ರಂದು ಮಾನ್ಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಸೇವಾ ನಿಯಮಗಳು-ವಿಶೇಷ ಕೋಶ ಇವರು ಸುತ್ತೋಲೆ ಒಂದನ್ನು ಹೊರಡಿಸಿ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮಾನ್ಯತೆ ‌ಇಲ್ಲದ ಸರ್ಕಾರಿ ನೌಕರರ ಸೇವಾ ಸಂಘಗಳನ್ನು ನಿರ್ಬಂಧಿಸಲು ‌ಎಲ್ಲ ಇಲಾಖೆಯ ‌ಮುಖ್ಯಸ್ಥರಿಗೆ ಸೂಚಿಸಿದ್ದು ಇರುತ್ತದೆ. ಸರ್ಕಾರಿ ನೌಕರರ ಸೇವಾ ಸಂಘಗಳು ಸಹಕಾರ ಸಂಘಗಳ ನೊಂದಣಿ ಕಾಯ್ದೆ 1960 ರಂತೆ ನೊಂದಣಿ ಆದ ಸಂಘಗಳಾಗಿದ್ದು ಸರ್ಕಾರಿ ನೌಕರರ ಹಿತಾಸಕ್ತಿ ಕಾಪಾಡಲು ಹಾಗೂ ಅವರ ಕಾರ್ಯಕ್ಷಮತೆ ಹೆಚ್ಚಿಸಲು ಕ್ರೀಯಾಶೀಲ ಚಟುವಟಿಕೆ ರೂಪಿಸಿ ಆಡಳಿತ ಯಂತ್ರ ಸುಧಾರಣೆಗೆ ಸರ್ಕಾರಕ್ಕೆ ಪರೋಕ್ಷವಾಗಿ ಸಹಕಾರ ನೀಡುತ್ತಿರುವ ಸಂದರ್ಭದಲ್ಲಿ ಇಂತಹ ಸುತ್ತೋಲೆಯ ಮೂಲಕ ಅವುಗಳನ್ನು ನಿರ್ಬಂಧಿಸಲು ಸೂಚಿಸಿದ್ದು ನಿಜಕ್ಕೂ ಅನ್ಯಾಯದ ಸಂಗತಿಯಾಗಿದೆ. ಆದ್ದರಿಂದ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ತಾವು ನಮಗಾದ ಅನ್ಯಾಯ ಸರಿಪಡಿಸಿ ನ್ಯಾಯ ಒದಗಿಸಲು ತಮ್ಮಲ್ಲಿ  ಸಂಘಟನೆಗಳ ಪರವಾಗಿ ಮುಖ್ಯ ಮಂತ್ರಿಗಳವರಿಗೆ ಪತ್ರದ ಮೂಲಕ ರಾಜ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ, ಪ್ರ.ಕಾ.ಮಲ್ಲಿಕಾರ್ಜುನ.ಸಿ.ಉಪ್ಪಿನ, ಗೌರವಾಧ್ಯಕ್ಷರಾದ ಎಲ್.ಆಯ್.ಲಕ್ಕಮ್ಮನವರ ಮಹಾ ಪೋಷಕರಾದ ಪವಾಡೆಪ್ಪ ಕಾರ್ಯಾಧ್ಯಕ್ಷರಾದ ಶರಣಪ್ಪಗೌಡ್ರ, ಕೋಶಾಧ್ಯಕ್ಷರಾದ ಎಸ್.ಎಫ್.ಪಾಟೀಲ ಮುಂತಾದವರು ವಿನಂತಿಸುತ್ತೇವೆ

ಗೌರವಾನ್ವಿತ ವಂದನೆಗಳೊಂದಿಗೆ

ತಮ್ಮ ವಿಧೇಯರು


Spread the love

Leave a Reply

Your email address will not be published. Required fields are marked *

You may have missed