ಬಲಿಷ್ಠವಾಗುತ್ತಿರುವ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
1 min readಧಾರವಾಡ: ಶಿಕ್ಷಕರ ಏಳಿಗೆಗಾಗಿ ಸದಾಕಾಲ ಮುಂಚೂಣಿಯಲ್ಲಿರುವ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತಷ್ಟು ರಚನಾತ್ಮಕವಾಗಿ ಮುನ್ನುಗ್ಗುತ್ತಿದ್ದು, ಹಲವು ಪ್ರದೇಶಗಳಲ್ಲಿ ತಮ್ಮ ಘಟಕಗಳಿಗೆ ಶಿಕ್ಷಕರನ್ನ ನೇಮಕ ಮಾಡಿದೆ.
ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕ ಘಟಕಕ್ಕೆ ಸುರೇಶ ಪಾಟೀಲ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಇನ್ನುಳಿದಂತೆ ಉಪಾಧ್ಯಕ್ಷರಾಗಿ ಟಿ.ಪಿ.ಪಾಟೀಲ, ಕಾರ್ಯದರ್ಶಿಯಾಗಿ ಉದಯ ಮೊರಬ, ಖಜಾಂಚಿಯಾಗಿ ಬಸವರೆಡ್ಡಿ ಮಾಡೊಳ್ಳಿ, ಸಹ ಕಾರ್ಯದರ್ಶಿಯಾಗಿ ಡಿ.ಎಫ್.ಸೋಜ, ಸದಸ್ಯರನ್ನಾಗಿ ಎಸ್.ಎಂ.ಕಿತ್ತೂರ, ವಿ.ಎಚ್.ಕುಂದಗೋಳ, ಶೋಭಾ ಖೋತ, ಎಸ್.ವಿ.ಲಮಾಣಿ, ಡಾ.ನರಸಿಂಹಲು, ಎನ್.ಎ.ಕಿತ್ತೂರು ಹಾಗೂ ಎಸ್.ಎಂ.ಇಳಿಗೇರ ಅವರನ್ನ ನೇಮಕ ಮಾಡಲಾಗಿದೆ.
ಇದರ ಜೊತೆಗೆ ಇಳಕಲ್ ಹಾಗೂ ಹುನಗುಂದ ತಾಲೂಕು ಘಟಕಗಳನ್ನ ರಚನೆ ಮಾಡಲಾಗಿದೆ. ರಾಜ್ಯ ಉಪಾಧ್ಯಕ್ಷ ರಾಮಪ್ಪ ಹಂಡಿ, ಬಾಗಲಕೋಟೆ ಜಿಲ್ಲಾಧ್ಯಕ್ಷ ಎಸ್.ಆರ್.ಎಮ್ಮಿಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಮಲಾಕ್ಷಿಯವರಿಗೆ ಈ ಬಗ್ಗೆ ಅಭಿನಂದನೆ ತಿಳಿಸಲಾಗಿದೆ.
ಶಿಕ್ಷಕರ ಪರವಾಗಿರುವ ಒಗ್ಗಟ್ಟಾಗಿ ಕಾರ್ಯನಿರ್ವಹಿಸುವ ಶಕ್ತಿ ಎಲ್ಲರಲ್ಲೂ ಹೆಚ್ಚಾಗಲಿ ಎಂದು ಗ್ರಾಮೀಣ ಸಂಘದ ಅಧ್ಯಕ್ಷ ಅಶೋಕ ಸಜ್ಜನ ಸದಾಶಯ ವ್ಯಕ್ತಪಡಿಸಿ, ಎಲ್ಲ ಪದಾಧಿಕಾರಿಗಳಿಗೂ ಶುಭಾಶಯಗಳನ್ನ ತಿಳಿಸಿದ್ದಾರೆ.