ವಿದ್ಯಾಗಮ ನಿಂತರೂ ಶಿಕ್ಷಕರ ಸಾವು ನಿಲ್ಲುತ್ತಿಲ್ಲ: ಒಂದೇ ಜಿಲ್ಲೆಯಲ್ಲಿ 11ಶಿಕ್ಷಕರ ಸಾವು
1 min readಕಲಬುರಗಿ: ವಿದ್ಯಾಗಮ ಯೋಜನೆಯನ್ನ ಸರಕಾರ ಈಗಾಗಲೇ ತಾತ್ಕಾಲಿಕವಾಗಿ ರದ್ದು ಮಾಡಿ ಆದೇಶ ಹೊರಡಿಸಿದ್ದರೂ ಕೂಡಾ ಶಿಕ್ಷಕರ ಸಾವುಗಳು ಮುಂದುವರೆದಿದ್ದು, ಜಿಲ್ಲೆಯೊಂದರಲ್ಲೇ 11 ಶಿಕ್ಷಕರು ಕೊರೋನಾಗೆ ಬಲಿಯಾಗಿರುವ ಮಾಹಿತಿಯನ್ನ ಶಿಕ್ಷಣ ಇಲಾಖೆಯೇ ನೀಡಿದೆ.
ವಿದ್ಯಾಗಮಯ ಯೋಜನೆಯಲ್ಲಿ ನಿರಂತರವಾಗಿ ಭಾಗಿಯಾದ ಸುಮಾರು 11 ಶಿಕ್ಷಕರು ಕೊರೋನಾ ಪಾಸಿಟಿವ್ ದೃಢಪಟ್ಟು, ನಂತರ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿರುವುದನ್ನ ಇಲಾಖೆಯ ಮೂಲಗಳು ದೃಢಪಡಿಸಿವೆ.
ದೇಶದಲ್ಲೇ ವಿದ್ಯಾಗಮ ಯೋಜನೆ ಆರಂಭಿಸಿದ್ದು ಕರ್ನಾಟಕ ಸರಕಾರ. ಕೆಲವೊಂದಿಷ್ಟು ಮುಂಜಾಗ್ರತೆ ಕ್ರಮಗಳನ್ನ ತೆಗೆದುಕೊಳ್ಳದ ಪರಿಣಾಮ ಹಲವು ಶಿಕ್ಷಕರು ಕೊರೋನಾಗೆ ಬಲಿಯಾಗುವಂತಾಯಿತು.
ಜೇವರ್ಗಿ ತಾಲೂಕಿನ ರಾಜೋಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಸಜ್ಜನ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಜೋಗದ ಸೇರಿದಂತೆ 11 ಶಿಕ್ಷಕರು ಮರಣ ಹೊಂದಿದ್ದಾರೆ.
ಸೂಫಿ ಸಂತರ ನಾಡೆಂದೇ ಖ್ಯಾತಿ ಕಳಿಸಿರುವ ಕಲಬುರಗಿಯಲ್ಲೂ ಈ ಮಟ್ಟದ ಶಿಕ್ಷಕರು ಕೊರೋನಾಗೆ ಬಲಿಯಾಗಿರುವುದು ಶಿಕ್ಷಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಇದೀಗ ದಸರಾ ರಜೆ ಘೋಷಣೆ ಮಾಡಿದರೂ, ಕೆಲವು ಶಿಕ್ಷಕರು ಆತಂಕದಿಂದ ಮನೆ ಹೊರಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ.