ಪ್ರತಿ ಶಿಕ್ಷಕರಿಗೂ ಲಸಿಕೆ- ಗಂಭೀರವಾಗಿ ಪರಿಗಣಿಸಿ: ಸರಕಾರದ ಗಮನ ಸೆಳೆಯಲು ಹೊರಟ್ಟಿಯವರಿಗೆ ಪತ್ರ…!
1 min readಹುಬ್ಬಳ್ಳಿ: ಸಾವಿರ ಸಮೀಪ ಶಿಕ್ಷಕರ ಸಾವುಗಳಾಗಿದ್ದು, ಗಂಭೀರವಾಗಿ ಪರಿಗಣಿಸಿ ಎಲ್ಲಾ ಶಿಕ್ಷಕರಿಗೆ ಲಸಿಕೆ ನೀಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲು ವಿಧಾನಪರಿಷತ್ ಸಭಾಪತಿ ಹೊರಟ್ಟಿಯವರಿಗೆ ಗ್ರಾಮೀಣ ಶಿಕ್ಷಕರ ಸಂಘ ಒತ್ತಾಯಿಸಿದೆ.
ರಾಜ್ಯದ ಸಮಸ್ತ ಶಿಕ್ಷಕರ ಕುರಿತು ಕಾಳಜಿ ಪರ ನಿಲುವಿನೊಂದಿಗೆ ಘನ ಸರ್ಕಾರಕ್ಕೆ ಪತ್ರ ಬರೆದು ಅನೇಕ ಅನುಕೂಲತೆಗಳನ್ನು ವಿಶೇಷವಾಗಿ ಫ್ರಂಟ್ ಲೈನ್ ವಾರಿಯರ್ಸ್ ಅಂತ ಪರಿಗಣಿಸುವಲ್ಲಿ ಶಿಕ್ಷಕರ ಧ್ವನಿ ಹಾಗೂ ಜೀವಾಳು ಆಗಿದ್ದಿರಿ ಈ ಹಿನ್ನೆಲೆಯಲ್ಲಿ ನಾಡಿನ ಸಮಸ್ತ ಗುರು ಬಳಗದ ವತಿಯಿಂದ ತಮ್ಮಗೆ ಹೃತ್ಪೂರ್ವಕ ಅಭಿನಂದಿಸುತ್ತೇವೆ.
ಈಗ ರಾಜ್ಯದಲ್ಲಿ ಜುಲೈ ಒಂದರಿಂದ ಶಾಲೆಗಳು ಆರಂಭ ಆಗುವುದರೊಳಗಾಗಿ ಸರಕಾರಿ/ ಅನುದಾನಿತ/ ಅನುದಾನರಹಿತ ಪ್ರಾಥಮಿಕ /ಪ್ರೌಢ/ ಪದವಿಪೂರ್ವ/ ಕಾಲೇಜು ಎಲ್ಲರಿಗೂ ಪ್ರಥಮ ಆದ್ಯತೆಯಲ್ಲಿ ಕೋವ್ಯಾಕ್ಸಿನ್ ಕೊವಿಶೀಲ್ಡ್ ಲಸಿಕೆಗಳನ್ನು ವಯೋ ನಿರ್ಬಂಧ ಇಲ್ಲದೆ ನೀಡುವ ವ್ಯವಸ್ಥೆಯನ್ನು ಮಾಡಲು ತಾವುಗಳು ಸರ್ವ ಮಾನ್ಯ ಮುಖ್ಯಮಂತ್ರಿಗಳವರು ,ಆರೋಗ್ಯ ಸಚಿವರು ಶಿಕ್ಷಣ ಸಚಿವರು ಹಾಗೂ ಸರ್ಕಾರದ ಮುಖ್ಯ /ಪ್ರಧಾನ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಿ ನಮ್ಮೆಲ್ಲರ ,ವಿದ್ಯಾರ್ಥಿಗಳ ಹಿತರಕ್ಷಣೆ ,ಆರೋಗ್ಯ ರಕ್ಷಣೆ ಮಾಡಬೇಕೆಂದು ಈ ಮೂಲಕ ನಾಡಿನ ಸಮಸ್ತ ಅಧ್ಯಾಪಕ ಬಳಗದಿಂದ ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇವೆ
ಹಾಗೂ ಎರಡನೇ ಕೋವಿಡ್ -19 ಅಲೆಯಲ್ಲಿ ಸಾವಿರಕ್ಕೂ ಸಮೀಪ ಶಿಕ್ಷಕರು ಮೃತರಾಗಿರುವ ಸಂಗತಿ ಮನಗಂಡು ಲಸಿಕಾ ಪ್ರಕ್ರಿಯೆ ಗಂಭೀರವಾಗಿ ಪರಿಗಣಿಸಲೂ ಸಹ ಮತ್ತೊಮ್ಮೆ ಮಗದೊಮ್ಮೆ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಶೋಕ ಸಜ್ಜನ, ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಉಪ್ಪಿನ್, ಗೌರವಾಧ್ಯಕ್ಷರಾದ ಎಲ್ ಐ ಲಕ್ಕಮ್ಮನವರ, ಕೋಶಾಧ್ಯಕ್ಷರಾದ ಎಸ್ ಎಫ್ ಪಾಟೀಲ್, ಕಾರ್ಯಾಧ್ಯಕ್ಷರಾದ ಶರಣಪ್ಪ ಗೌಡ ಆರ್ ಕೆ, ಮಹಾಪೋಷಕರಾದ ಪವಾಡಪ್ಪ ಕಾಂಬ್ಳೆ, ಉಪಾಧ್ಯಕ್ಷರುಗಳಾದ ಗೋವಿಂದ ಜುಜಾರೆ, ಹನುಮಂತಪ್ಪ ಮೇಟಿ, ಡಿ.ಎಸ್.ಭಜಂತ್ರಿ ಕುಕನೂರ, ರಾಮಪ್ಪ ಹಂಡಿ, ಎಂ.ಐ. ಮುನವಳ್ಳಿ, ಮಹ್ಮದ್ ರಫಿ, ಡಿ ಟಿ ಬಂಡಿವಡ್ಡರ, ಶರಣಬಸವ ಬನ್ನಿಗೋಳ, ಎಂ.ವಿ ಕುಸುಮಾ, ರಾಜಶ್ರೀ ಪ್ರಭಾಕರ್, ಜಿ ಟಿ ಲಕ್ಷ್ಮೀದೇವಮ್ಮ, ಕಲ್ಪನಾ ಚಂದನಕರ, ರವಿ ಬಂಗೆನ್ನವರ ಶಿವರಡ್ಡಿ, ಅಶೋಕ ಬಿಸೆರೊಟ್ಟಿ, ನಾಗರಾಜ್ ಆತಡಕರ, ನಾಗರಾಜ್ ಕೆ, ರೇಖಾ ದೇವಿ, ದೇವಿಕಾ ಕಮ್ಮಾರ ಮುಂತಾದ ಪದಾಧಿಕಾರಿಗಳು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ.