ವರ್ಗಾವಣೆ ಗಂಭೀರವಾಗಿ ಪರಿಗಣಿಸಿ ಮಧ್ಯ ಪ್ರವೇಶಿಸಲು ಗ್ರಾಮೀಣ ಶಿಕ್ಷಕ ಸಂಘ ಆಗ್ರಹಿಸಿದ್ದು ಯಾರನ್ನ…!?
1 min readಧಾರವಾಡ: ಶಿಕ್ಷಕರ ವರ್ಗಾವಣೆಗಾಗಿ ಸುಗ್ರೀವಾಜ್ಞೆ ಹೊರಡಿಸುವುದೇ ಆದಲ್ಲಿ 7 ಬೇಡಿಕೆಗಳನ್ನು ಪರಿಗಣಿಸಲು ಮುಖ್ಯಮಂತ್ರಿಗಳು ಮುಂದಾಗಬೇಕೆಂದು ಆಗ್ರಹ ಮಾಡಿದ್ದಾರೆ.
ಸಂಘದ ಮನವಿ ಹಿಂಗಿದೆ ನೋಡಿ..
2020-21 ರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕುರಿತಂತೆ ಗೌರವಾನ್ವಿತ ಕೆ.ಎ.ಟಿ ಹಾಗೂ ಗೌರವಾನ್ವಿತ ಉಚ್ಛ ನ್ಯಾಯಾಲಯ 2020 ರ ವರ್ಗಾವಣೆ ಅಧಿನಿಯಮ ಪ್ರಕಾರ ಪ್ರಕ್ರಿಯೆ ನಡೆಸಲು ತೀರ್ಪು ನೀಡಿರುವುದು ನಮಗೆ ತಿಳಿದು ಬಂದಿದೆ ಹೀಗಿರುವಂತೆ ಮುಂಬರುವ ಸಚಿವ ಸಂಪುಟದಲ್ಲಿ ವರ್ಗಾವಣೆ ಕುರಿತಂತೆ ಸುಗ್ರೀವ ಆಜ್ಞೆ ಹೊರಡಿಸುತ್ತಿದ್ದಿರೆಂದು ಮಾಧ್ಯಮ ಗಳ ಮೂಲಕ ನಮಗೆ ತಿಳಿದು ಬಂದಿದೆ. ಈ ದಿಶೆಯಲ್ಲಿ ಘನಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿದ್ದೇ ಆದಲ್ಲಿ ವರ್ಗಾವಣೆ ಪ್ರಕ್ರಿಯೆ ಯಲ್ಲಿ ಈ ಕೆಳಗಿನ ನಮ್ಮ ಬೇಡಿಕೆಗಳನ್ನು /ನಿಯಮಗಳನ್ನು ಪರಿಗಣಿಸಬೇಕು.
1.ಕಡ್ಡಾಯ ವರ್ಗಾವಣೆ ಯಾದವರಿಗೆ ಆದ್ಯತೆ ನೀಡುವಂತೆ CRP/BRP/ECO ಇವರುಗಳಿಗೆ ಆದ್ಯತೆಯಲ್ಲಿ ಕೌನ್ಸ್ ಲಿಂಗ್ ನಡೆಸಬೇಕು.
2.ವಲಯ ವರ್ಗಾವಣೆ ಎಂದು ನಾಮಾಂಕಿತ ಗೊಂಡಿರುವ ಪ್ರಕ್ರಿಯೆಯನ್ನು ಗ್ರಾಮೀಣ ಪ್ರದೇಶದ ಹಿರಿಯ ಶಿಕ್ಷಕರು ನಗರ ಪ್ರದೇಶಗಳಿಗೆ ವರ್ಗಾವಣೆ ಯಾಗಲು ಅವಕಾಶ ಕಲ್ಪಿಸಬೇಕು.
3. 25% ಖಾಲಿಯಿರುವ ಹುದ್ದೆಗಳ ತಾಲೂಕಿನಿಂದ ವರ್ಗಾವಣೆ ಇಲ್ಲವೆಂಬ ನಿಯಮವನ್ನು ಸಂಪೂರ್ಣವಾಗಿ ಕೈಬಿಡಬೇಕು.
4.ಹಿಂದಿ(PST) ಶಿಕ್ಷಕರನ್ನು ಸಾಮನ್ಯ ಶಿಕ್ಷಕರೆಂದು ಪರಿಗಣಿಸಿ ಖಾಲಿ ಹುದ್ದೆಗಳನ್ನು ತೋರಿಸಬೇಕು.
5.ಹಿಂದಿ (PST) ಶಿಕ್ಷಕರಿಗೆ ಸಾಮನ್ಯ ಶಿಕ್ಷಕರೊಂದಿಗೆ ಪರಸ್ಪರ ವರ್ಗಾವಣೆಗೆ ಅವಕಾಶ ಮಾಡಿಕೊಡಬೇಕು.
6.ಅಂತರ್ ಜಿಲ್ಲಾ ಪರಸ್ಪರ ವರ್ಗಾವಣೆ ಸೇವಾವಧಿಯಲ್ಲಿ ೧ ಬಾರಿ ಮಾತ್ರ ಎನ್ನುವ ನಿಯಮವನ್ನು ಕೈಬಿಡಬೇಕು
7.ಪರಸ್ಪರ ವರ್ಗಾವಣೆ ಅವಧಿಯನ್ನು 7 ವರ್ಷದಿಂದ 3 ವರ್ಷಕ್ಕೆ ಇಳಿಸಬೇಕು.
ನಮ್ಮ ಸಂಘದ ಈ ಮೇಲಿನ 7 ಬೇಡಿಕೆಗಳನ್ನು ಸುಗ್ರೀವಾಜ್ಞೆಯಲ್ಲಿ ಪರಿಗಣಿಸಿ ಶಿಕ್ಷಕ ಸ್ನೇಹಿ ವರ್ಗಾವಣೆ ಮಾಡಿ ಶಿಕ್ಷಕರು ನೆಮ್ಮದಿಯಿಂದ ಬೋಧನಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಅನುಕೂಲಿಸಬೇಕೆಂದು ನಾಡಿನ ಸಮಸ್ತ ವರ್ಗಾವಣೆ ಆಪೇಕ್ಷಿತರ ಧ್ವನಿಯಾಗಿ ರಾಜ್ಯಾಧ್ಯಕ್ಷರಾದ ಅಶೋಕ ಎಮ್ ಸಜ್ಜನ, ಪ್ರ.ಕಾರ್ಯದರ್ಶಿ ಗಳಾದ ಮಲ್ಲಿಕಾರ್ಜುನ ಉಪ್ಪಿನ, ಗೌರವಾಧ್ಯಕ್ಷ ಎಲ್. ಐ. ಲಕ್ಕಮ್ಮನವರ, ಕಾರ್ಯಾಧ್ಯಕ್ಷ ಶರಣಪ್ಪಗೌಡ ಆರ್.ಕೆ, ಕೋಶಾಧ್ಯಕ್ಷ ಎಸ್. ಎಫ್. ಪಾಟೀಲ್, ಮಹಾಪೋಷಕರಾದ ಪವಾಡಪ್ಪ ಕಾಂಬ್ಳೆ, ಉಪಾಧ್ಯಕ್ಷರುಗಳಾದ ಹನಮಂತಪ್ಪ ಮೇಟಿ, ಗೋವಿಂದ ಜುಜಾರೆ, ರಾಮಪ್ಪ ಹಂಡಿ, ಎಮ್.ಐ. ಮುನವಳ್ಳಿ, ಎಮ್. ವಿ. ಕುಸುಮಾ, ಸಹಕಾರ್ಯದರ್ಶಿಗಳಾದ ಶರಣಬಸವ ಬನ್ನಿಗೋಳ, ರವಿ ಬಂಗೆನ್ನವರ ಮುಂತಾದವರು ಈ ಮೂಲಕ ಆಗ್ರಹಿಸುತ್ತಿದ್ದೇವೆ.
ಗೌರವಾನ್ವಿತ ವಂದನೆಗಳೊಂದಿಗೆ