ಹೊರಬಿತ್ತು ಶಿಕ್ಷಕರ ವರ್ಗಾವಣೆಯ ಸುಗ್ರಿವಾಜ್ಞೆ…!
1 min readಬೆಂಗಳೂರು: ಹಲವು ಗೊಂದಲಗಳನ್ನ ವರ್ಗಾವಣೆ ಕಾಲದಲ್ಲಿ ಮಾಡಿದ್ದನ್ನ ವಿರೋಧಿಸಿ ಕೆಎಟಿಗೆ ಹೋಗಿದ್ದ ಶಿಕ್ಷಕರಿಗೆ ಹಿನ್ನೆಡೆಯಾಗುವಂತಹ ತೀರ್ಮಾನವನ್ನ ಸುಗ್ರಿವಾಜ್ಞೆಯ ಮೂಲಕ ಹೊರತರುವಲ್ಲಿ ಕೊನೆಗೂ ಸರಕಾರ ಯಶಸ್ವಿಯಾಗಿದೆ.
2016-17ರಲ್ಲಿ ಹೆಚ್ಚುವರಿಯಾಗಿದ್ದ ಶಿಕ್ಷಕರಿಗೆ ಮೊದಲ ಆಧ್ಯತೆ ಮೇರೆಗೆ ವರ್ಗಾವಣೆ ನೀಡಲು ಮುಂದಾಗಿದ್ದ ಸರಕಾರದ ಕ್ರಮವನ್ನ ವಿರೋಧಿಸಿ ಶಿಕ್ಷಕರು ಕೆಎಟಿಗೆ ಹೋಗಿದ್ದರು. ಅಷ್ಟೇ ಅಲ್ಲ, ಶಿಕ್ಷಕರ ನಡಾವಳಿಯ ಬಗ್ಗೆ ಸರಕಾರ ಹೈಕೋರ್ಟನ್ನ ಮೆಟ್ಟಿಲೇರಿತ್ತು.
ಹೈಕೋರ್ಟ್ ಕೂಡಾ ಶಿಕ್ಷಕರ ಪರವಾಗಿಯೇ ಆದೇಶವನ್ನ ನೀಡಿದ್ದರಿಂದ ವರ್ಗಾವಣೆಯ ವಿಷಯ ಮತ್ತಷ್ಟು ಕಂಗಟ್ಟಾಗಿತ್ತು. ಯಾವ ವಿಷಯಕ್ಕೆ ಸರಕಾರಕ್ಕೆ ಹೈಕೋರ್ಟಿನಲ್ಲಿ ಹಿನ್ನೆಡೆಯಾಗಿತ್ತೋ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಸರಕಾರ ರಾಜ್ಯಪಾಲರ ಮೂಲಕ, ಸುಗ್ರಿವಾಜ್ಞೆಯನ್ನ ಹೊರಗೆ ತಂದಿದ್ದು, ಶಿಕ್ಷಕರು ಯಾವ ವಿಷಯವನ್ನ ಬೇಡವೆಂದಿದ್ದರೋ ಅದನ್ನ ಈ ಮೂಲಕ ಜಾರಿಗೆ ತರುತ್ತಿದೆ.
ರಾಜ್ಯದ ಎರಡ್ಮೂರು ಸಾವಿರ ಶಿಕ್ಷಕರಿಗಾಗಿ ಇಂತಹ ನಿರ್ಣಯ ತೆಗೆದುಕೊಂಡ ಸರಕಾರ, ಹತ್ತಾರು ಸಾವಿರ ಶಿಕ್ಷಕರ ಬೇಡಿಕೆಗೆ ಮಣಿಯದೇ ಇರುವುದು ಸೋಜಿಗ ಮೂಡಿಸಿದೆ. ವರ್ಗಾವಣೆಯ ಪ್ರಕ್ರಿಯೆಗೆ ಮತ್ಯಾವಾಗ ಚಾಲನೆ ದೊರೆಯತ್ತೋ ಕಾದು ನೋಡಬೇಕಿದೆ..