ಶಿಕ್ಷಕರ ವರ್ಗಾವಣೆ: ಬಿಎಸ್ವೈ ಸರಕಾರಕ್ಕೆ ಮುಖಭಂಗ..

ಬೆಂಗಳೂರು: ಸರಕಾರಿ ಶಾಲೆಯ ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಮುಖಭಂಗವಾಗಿದ್ದು, ಕಡ್ಡಾಯ ವರ್ಗಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಈ ಮೊದಲು ನೀಡಿದ್ದ ತೀರ್ಪನ್ನ ಹೈಕೋರ್ಟ್ ಪ್ರಧಾನ ಪೀಠ ಎತ್ತಿ ಹಿಡಿಯುವ ಮೂಲಕ ಸರಕಾರಕ್ಕೆ ಮುಖಭಂಗವಾಗಿದೆ.

ಕಳೆದ ಡಿಸೆಂಬರನಲ್ಲಿ ನೆನೆಗುದಿಗೆ ಬಿದ್ದಿದ್ದ ಶಿಕ್ಷಕರ ವರ್ಗಾವಣೆಗೆ ಚಾಲನೆ ನೀಡಲಾಗಿತ್ತು. ಕಡ್ಡಾಯ ವರ್ಗಾವಣೆಯಲ್ಲಿ ಕೆಲವೊಂದು ನಿಯಮಗಳನ್ನ ಸಡಿಸಲಾಗಿತ್ತು. ಕಡ್ಡಾಯ ವರ್ಗಾವಣೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಒಂದು ವರ್ಷ ಕೆಲಸ ಮಾಡಿದವರನ್ನ ನಗರ ಪ್ರದೇಶಗಳಿಗೆ ತರುವ ಕುರಿತು ನಿಯಮದಲ್ಲಿ ಅಳವಡಿಸಲಾಗಿತ್ತು.
ಗ್ರಾಮೀಣ ಪ್ರದೇಶಗಳಲ್ಲಿ ಒಂದೇ ವರ್ಷ ಕೆಲಸ ಮಾಡಿದ ಶಿಕ್ಷಕರನ್ನ ಮತ್ತೆ ನಗರ ಪ್ರದೇಶಗಳಿಗೆ ತರುವ ಹುನ್ನಾರ ಈ ನಿಯಮದಲ್ಲಿದೆ. ಎಷ್ಟೋ ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವವರಿಗೆ ಅನ್ಯಾಯವಾಗಿದೆ ಎಂದು ಕೆಲವು ಶಿಕ್ಷಕರು ಕೆಎಟಿ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ಕೆಎಟಿ ವರ್ಗಾವಣೆ ಪ್ರಕ್ರಿಯೆಯಲ್ಲಿ ಸರ್ಕಾರ ಈ ರೀತಿ ಮಾಡುವುದು ತಪ್ಪು ಎಂದು ತೀರ್ಪು ನೀಡಿತ್ತು. ಈ ತೀರ್ಪನ್ನ ಪ್ರಶ್ನಿಸಿ ಶಿಕ್ಷಣ ಇಲಾಖೆ ಹೈಕೋರ್ಟ್ ಮೊರೆ ಹೋಗಿತ್ತು. ಆದರೆ, ಹೈಕೋರ್ಟ್ ಕೂಡಾ ಕೆಎಟಿ ತೀರ್ಪನ್ನ ಎತ್ತಿ ಹಿಡಿಯುವ ಮೂಲಕ ಶಿಕ್ಷಕರ ಪರವಾಗಿ ಆದೇಶವಾಗಿದೆ.