ಧಾರವಾಡದಲ್ಲಿ ಶಿಕ್ಷಕರ “ರಣ ಕದನ” ಜೀವಕ್ಕಾಗಿ ಕಣ್ಣೀರಿಟ್ಟು ಬಿದ್ದು ಹೊರಳಾಡಿದ ಶಿಕ್ಷಕಿಯರು…!

ಧಾರವಾಡ: ಶಿಕ್ಷಕರ ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆಗಾಗಿ ನಡೆಯುತ್ತಿರುವ ಕೌನ್ಸಿಲಿಂಗ್ ಸಮಯದಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಶಿಕ್ಷಕಿರೋರ್ವರು ಕೆಳಗೆ ಬಿದ್ದು, ಕಣ್ಣೀರಿಟ್ಟು ಹೊರಳಾಡಿದ ಘಟನೆ ನಗರದ ಡಿಸಿಡಬ್ಲೂನಲ್ಲಿ ನಡೆದಿದೆ.
ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ..
ಇಲಾಖೆಯಲ್ಲಿ ಗೊಂದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕೌನ್ಸಿಲಿಂಗ್ ವೇಳೆಯಲ್ಲಿ ವಾದಗಳು ಆರಂಭಗೊಂಡವು. ದೂರದೂರಿಗೆ ತಮ್ಮನ್ನ ವರ್ಗಾವಣೆ ಮಾಡಿದ್ರೇ ಹೇಗೆ ಎಂದು ಬೇಸರಿಸಿಕೊಂಡ ಶಿಕ್ಷಕಿಯೋರ್ವರು ಕಣ್ಣೀರಾಕುತ್ತಲೇ ನೆಲಕ್ಕುರಳಿದರು.
ಕೆಲ ಸಮಯದ ನಂತರ ಡಿಡಿಪಿಐ ಮೋಹನಕುಮಾರ ಹಂಚಾಟೆ ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿಯನ್ನ ನಿಭಾಯಿಸಿ, ಸಮಾಝಾಯಿಸಿ ಕೊಡುವ ಪ್ರಯತ್ನವನ್ನೂ ಮಾಡುತ್ತಿರುವುದು ಕಂಡು ಬಂದಿತು.