ಶಿಕ್ಷಕರ ವರ್ಗಾವಣೆಗೆ ಕೊನೆಗೂ ಹೊರಬಿತ್ತು ಅಧಿಸೂಚನೆ: ವೇಳಾಪಟ್ಟಿ ವಿವರ ಬೇಕಾ..?
ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ವೇಳಾ ಪಟ್ಟಿ ಪ್ರಕಟವಾಗಿದೆ. ಬಹು ದಿನಗಳಿಂದ ಶಿಕ್ಷಕರು ಕಾಯುತ್ತಿದ್ದ ವರ್ಗಾವಣೆ ವೇಳಾಪಟ್ಟಿ ಅಧಿಸೂಚನೆಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. ನವೆಂಬರ್ 11ರಂದು ಅಧಿಸೂಚನೆ ಪ್ರಕಟವಾಗಿದ್ದು, ಡಿಸೆಂಬರ್ 16 ಮತ್ತು 17ರಂದು ಪ್ರಾಥಮಿಕ ಶಾಲೆ ಹಾಗೂ 18 ಮತ್ತು 19ರಂದು ಪ್ರೌಢ ಶಾಲೆ ಶಿಕ್ಷಕರಿಗೆ ವರ್ಗಾವಣೆ ಕೌನ್ಸಿಲಿಂಗ್ ನಡೆಯಲಿದೆ.
ಕಳೆದ ಐದು ವರ್ಷಗಳಲ್ಲಿ ಒಂದೇ ಬಾರಿಗೆ ನಡೆದಿದ್ದ ವರ್ಗಾವಣೆಯಿಂದ ಶಿಕ್ಷಕ ಸಮೂಹ ರೋಸಿ ಹೋಗಿದ್ದರು. ಈ ಬಗ್ಗೆ ಹಲವು ಬಾರಿ ಶಿಕ್ಷಣ ಇಲಾಖೆಯೂ ಸೇರಿದಂತೆ ಸಿಎಂಗೂ ಮನವಿ ಮಾಡಿಕೊಂಡಿದ್ದರು.
ಚುನಾವಣೆಯ ಸಮಯದಲ್ಲಿ ಯಾವದೇ ತೊಂದರೆಯಾಗದಂತೆ ಚುನಾವಣೆ ಆಯೋಗಕ್ಕೂ ಶಿಕ್ಷಕ ಸಂಘದವರು ಮನವಿ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆಯನ್ನ ಮನವಿ ಮಾಡಿಕೊಂಡಿತ್ಉ.
ವರ್ಗಾವಣೆಯ ಅಧಿಸೂಚನೆ ಹೊರಗೆ ಬಿದ್ದಿದ್ದು, ಸುಗಮವಾಗಿ ವರ್ಗಾವಣೆ ನಡೆದು, ಶಿಕ್ಷಕರ ತೊಂದರೆಗಳು ಬಗೆಹರಿದರೇ ಸಾಕಲ್ಲವೇ.

