ಶಿಕ್ಷಕರ ವರ್ಗಾವಣೆ ಆರಂಭಿಸಿ-ಶಿಕ್ಷಕರ ಕುಟುಂಬ ಉಳಿಸಿ…!
1 min readಹುಬ್ಬಳ್ಳಿ: ಶಿಕ್ಷಕರ ವರ್ಗಾವಣೆಯನ್ನ ಪದೇ ಪದೇ ಮುಂದೂಡಿಕೆ ಮಾಡುತ್ತಿರುವ ಬಗ್ಗೆ ಬೇಸರವ್ಯಕ್ತಪಡಿಸಿರುವ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಇದಕ್ಕಾಗಿ ಸಿಎಂ ಸೇರಿದಂತೆ ಶಿಕ್ಷಣ ಇಲಾಖೆಯ ಸಚಿವ, ಅಧಿಕಾರಿಗಳಿಗೂ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಅವರು ಹೇಳಿದ್ದೇನು.. ಇಲ್ಲಿದೆ ನೋಡಿ..
ಮನವಿ ಪತ್ರದ ಸಾರಾಂಶ..
ವಿಷಯ.. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಲು ಗ್ರಾಮೀಣ ಶಿಕ್ಷಕರ ಸಂಘದ ಪುನರ್ ಮನವಿ
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಿ.ರಾಜ್ಯ ಘಟಕ ಹುಬ್ಬಳ್ಳಿಯ ಸಮಸ್ತ ಪದಾಧಿಕಾರಿಗಳು ಹಾಗೂ ವರ್ಗಾವಣೆ ಅಪೇಕ್ಷಿತರು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ. ಈಗಾಗಲೇ ನಮ್ಮ ಸಂಘದ ವತಿಯಿಂದ ಶಿಕ್ಷಕರ ವರ್ಗಾವಣೆ ಆರಂಭಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಶಿಕ್ಷಕರ ವರ್ಗಾವಣೆ ಆರಂಭವಾಗುತ್ತಿಲ್ಲ ಐದು ವರ್ಷಗಳಲ್ಲಿ ಒಂದು ಬಾರಿ ಮಾತ್ರ ಶಿಕ್ಷಕರ ವರ್ಗಾವಣೆ ನಡೆದಿದೆ.ನಾಲ್ಕು ತಿಂಗಳ ಹಿಂದೆ ಪ್ರಾರಂಭಗೊಂಡ ಪ್ರಕ್ರಿಯೆ ಕೆ.ಎ.ಟಿ.ಯಲ್ಲಿ ಅರ್ಜಿ ಇದ್ದ ಪ್ರಯುಕ್ತ ಸ್ಥಗಿತವಾಗಿತ್ತು.ಆದರೆ ಈಗ ಕೆ.ಎ.ಟಿಯಲ್ಲಿ ತೀರ್ಪು ಬಂದಿದೆ.ಆದರೆ ಈ ತನಕ ವರ್ಗಾವಣೆ ಪ್ರಕ್ರಿಯೆ ನಿಂತ ಕಾರಣ 72000 ಅರ್ಜಿ ಹಾಕಿದ ಪರಸ್ಪರ ಹಾಗೂ ಕೋರಿಕೆ ವರ್ಗಾವಣೆ ಅಪೇಕ್ಷಿತರು ಸಂಕಷ್ಟ ತೊಳಲಾಟಗಳಿಂದ ಕಣ್ಣೀರಿಡುತ್ತಿದ್ದಾರೆ.ಅರ್ಜಿ ಹಾಕಿದ ತೀವ್ರ ತರ ಕಾಯಿಲೆಯವರು ಮೃತಪಟ್ಟಿದ್ದಾರೆ.ಈ ಎಲ್ಲ ಅಂಶಗಳನ್ನು ಪರಿಗಣಿಸಿ ತತ್ ಕ್ಷಣ ವರ್ಗಾವಣೆ ಪ್ರಾರಂಭಿಸಲು ನಮ್ಮ ಸಂಘ ಆಗ್ರಹಿಸುತ್ತದೆ.ತತಕ್ಷಣ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಲು ವಿನಮ್ರವಾಗಿ ವಿನಂತಿಸುತ್ತೇವೆ.ಇಲ್ಲವಾದಲ್ಲಿ ನಿರಂತರವಾಗಿ ಹತ್ತು ಲಕ್ಷ ಪತ್ರ ಚಳುವಳಿ ಉಪವಾಸ ಸತ್ಯಾಗ್ರಹ ಆಮರಣಾಂತ ಉಪವಾಸ ಹಾಗೂ ಬೀದಿಗಿಳಿದು ಹೋರಾಟ ಮಾಡಬಹುದಾದ ಸಂದರ್ಭ ಒದಗಿಬರಬಹುದು. ಆದ್ದರಿಂದ ತಾವುಗಳು ಇದಕ್ಕೆ ಅವಕಾಶ ಕೊಡದೆ
ಶಿಕ್ಷಕರ ಮೇಲೆ ಕರುಣೆ ದಯೆ ತೋರಿ ವರ್ಗಾವಣೆ ಪ್ರಾರಂಭಿಸುವಿರೆಂದು ತುಂಬು ಭರವಸೆ ಹೊಂದಿದ್ದೇವೆ ಎಂದು ಮುಖ್ಯ ಮಂತ್ರಿಗಳಿಗೆ ಶಿಕ್ಷಣ ಸಚಿವರಿಗೆ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಂಘದ ರಾಜ್ಯಾಧ್ಯಕ್ಷರಾದ ಅಶೋಕ.ಎಮ್.ಸಜ್ಜನ, ರಾಜ್ಯ ಪ್ರ.ಕಾ.ಮಲ್ಲಿಕಾರ್ಜುನ ಸಿ.ಉಪ್ಪಿನ, ಗೌರವಾಧ್ಯಕ್ಷರಾದ ಎಲ್. ಆಯ್. ಲಕ್ಕಮ್ಮನವರ, ಕಾರ್ಯಾಧ್ಯಕ್ಷರಾದ ಶರಣಪ್ಪಗೌಡ್ರ, ಮಹಾ ಪೋಷಕರಾದ ಪವಾಡೆಪ್ಪ ಕಾಂಬಳೆ, ಕೋಶಾಧ್ಯಕ್ಷರಾದ ಎಸ್.ಎಫ್.ಪಾಟೀಲ, ರಾಜ್ಯ ಸಂಚಾಲಕರಾದ ಹನುಮಂತಪ್ಪ ಮೇಟಿ, ರಾಮಪ್ಪ ಹಂಡಿ, ಉಪಾಧ್ಯಕ್ಷರಾದ ಎಮ್.ಆಯ್.ಮುನವಳ್ಳಿ, ನಾಗರಾಜು ಕೆ, ಎಮ್.ವಿ.ಕುಸುಮಾ, ರಾಜಶ್ರೀ ಲಕ್ಷ್ಮಿದೇವಮ್ಮ, ಮಹ್ಮದ ರಫಿ, ಅರ್.ಎಮ್.ಕುರ್ಲಿ, ಶರಣಬಸವ ಬನ್ನಿಗೋಳ, ಆರ್.ಎಮ್.ಕಮ್ಮಾರ, ನಾಗರಾಜ ಆತಡಕರ, ಎಸ್.ಸಿ. ಬಸನಗೌಡರ, ಎಸ್.ಸಿ.ಕಾಮನಳ್ಳಿ, ಸುನಿಲಗೌಡ್ರ, ಪೀರಸಾಬ ನದಾಫ ಮುಂತಾದವರು ಮನವಿ ಮಾಡಿದ್ದಾರೆ.