ಕ.ರಾ.ಪ್ರಾ.ಶಾ.ಶಿ. ಸಂಘಕ್ಕೆ ರೂ.200 ಕಡಿತಕ್ಕೆ ಅಸಮ್ಮತಿ ನೀಡಿದ ಕಲಘಟಗಿ ತಾಲೂಕ ಶಿಕ್ಷಕರು…!
1 min readಹುಬ್ಬಳ್ಳಿ: ಶಿಕ್ಷಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿರುವ ಶಿಕ್ಷಕರ 200ರೂಪಾಯಿ ಕಟಾವಣೆಗೆ ರಾಜ್ಯಾಧ್ಯಂತ ಭಾರೀ ಬಿರುಗಾಳಿ ಬೀಸುತ್ತಿದ್ದು, ಬಹುತೇಕ ಶಿಕ್ಷಕರು ಹಣ ಕಟಾವಣೆ ಮಾಡದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಕೊಡುತ್ತಿದ್ದಾರೆ.
ಶಿಕ್ಷಕರ ವಿಳಂಬವಾದ ವರ್ಗಾವಣೆ, ಪದವೀಧರರ ಸಮಸ್ಯೆ, ಅಂತರ್ ಜಿಲ್ಲೆ ವರ್ಗಾವಣೆ, ಸಂಘದ ಆಮೆ ವೇಗದ ಕಾರ್ಯ ಚಟುವಟಿಕೆಗಳೇ ಶಿಕ್ಷಕರು ಇಂತಹ ನಿರ್ಧಾರಕ್ಕೆ ಬರಲು ಕಾರಣವೆನ್ನಲಾಗುತ್ತಿದೆ. ಇದು ಹೀಗೇ ಮುಂದುವರಿದರೆ ಸಂಘಕ್ಕೆ ಭಾರೀ ಹಿನ್ನಡೆಯುಂಟಾಗಲಿದೆ ಎನ್ನುತ್ತಿದ್ದಾರೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಶಿಕ್ಷಕರ 200 ರೂಪಾಯಿಗಳನ್ನ ಪಡೆಯಲಾಗತ್ತೆ. ಇದಕ್ಕೆ ಈ ವರ್ಷ ಹಲವು ಶಿಕ್ಷಕರು ವಿರೋಧ ವ್ಯಕ್ತಪಡಿಸುವ ಮೂಲಕ, ತಮ್ಮತನವನ್ನ ಮೆರೆಯುತ್ತಿದ್ದಾರೆ.
ಶಿಕ್ಷಕರಾದ ಎಸ್.ಎಫ್.ಪಾಟೀಲ, ರಾಜ್ಯ ಉಪಾಧ್ಯಕ ಶ್ರೀಕಾಂತ ರೋಣದ ಅವರು ಹಣ ಕಡಿತಕ್ಕೆ ಅಸಮ್ಮತಿ ವ್ಯಕ್ತಪಡಿಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರವನ್ನ ನೀಡಿದ್ದಾರೆ. ಶಿಕ್ಷಕರ ಈ ನಿರ್ಧಾರವನ್ನ ಅಶೋಕ ಎಮ್.ಸಜ್ಜನ ಹಾಗೂ ಎಲ್.ಐ.ಲಕ್ಕಮ್ಮನವರ ಸ್ವಾಗತಿಸಿದ್ದಾರೆ.