Posts Slider

Karnataka Voice

Latest Kannada News

ಮಹದೇವ ಮಾಳಗಿ ಕರುಣಾಜನಕ ಸ್ಥಿತಿ: ಸಿಎಂಗೆ ಮನವಿ ಮಾಡಿಕೊಂಡ ರಾಜ್ಯಾಧ್ಯಕ್ಷ ಅಶೋಕ ಸಜ್ಜನ

1 min read
Spread the love

ಧಾರವಾಡ: ಶಿಕ್ಷಣ ಇಲಾಖೆಯಲ್ಲಿ ಉತ್ತಮ ಸೇವೆ ಮಾಡುತ್ತಿದ್ದಾಗಲೇ ಅನಾರೋಗ್ಯದಿಂದ ಬಳಲುತ್ತಿರುವ ಮಹದೇವ ಮಾಳಗಿ ಕುಟುಂಬಕ್ಕೆ ಸ್ಪಂಧನೆ ನೀಡುವಂತೆ ಕರ್ನಾಟಕ ಸರಕಾರಿ ಗ್ರಾಮೀಣ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಸೇರಿದಂತೆ ಸಂಘದ ಎಲ್ಲ ಪದಾಧಿಕಾರಿಗಳು ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.

ಪತ್ರದ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರು
ಮಾನ್ಯ ಮುಖ್ಯ ಮಂತ್ರಿಗಳವರು
ಕರ್ನಾಟಕ ಸರ್ಕಾರ
ವಿಧಾನ ಸೌಧ ಬೆಂಗಳೂರು-01

ವಿಷಯ:- ಶ್ರೀ ಮಹಾದೇವ.ಬಿ. ಮಾಳಗಿ.ಶಿಕ್ಷಣಾಧಿಕಾರಿಗಳು.ಸಾರ್ವಜನಿಕ ಶಿಕ್ಷಣ ಇಲಾಖೆ.ಇವರಿಗೆ ಘನ ಸರ್ಕಾರದಿಂದ ಬರಬೇಕಾದ ವಿವಿಧ ಆರ್ಥಿಕ ಸೌಲಭ್ಯಗಳನ್ನು ನೀಡುವ ಕುರಿತು ಹಾಗೂ ಅವರ ಪತ್ನಿ ಶ್ರೀಮತಿ ಪ್ರಭಾವತಿಯವರಿಗೆ ಸರ್ಕಾರಿ ನೌಕರಿ ನೀಡುವ ಬಗ್ಗೆ ಇರುವ ಪ್ರಕರಣದ ಪ್ರಸ್ತಾವನೆಯನ್ನು ಶೀಘ್ರ ಇತ್ಯರ್ಥಪಡಿಸಲು ಮನವಿ

ಮಾನ್ಯರೆ

ಮೇಲಿನ ವಿಷಯವನ್ನು ನಮ್ಮ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಿ.ರಾಜ್ಯ ಘಟಕ ಹುಬ್ಬಳ್ಳಿ.ಇದರ ರಾಜ್ಯಾಧ್ಯಕ್ಷರು.ರಾಜ್ಯ ಪ್ರ.ಕಾರ್ಯದರ್ಶಿಗಳು ಮತ್ತು ಸರ್ವ ಪದಾಧಿಕಾರಿಗಳು ಈ ಮೂಲಕ ತಮ್ಮಲ್ಲಿ ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುವುದೇನೆಂದರೆ..

ಶ್ರೀ ಮಹಾದೇವ.ಬಿ.ಮಾಳಗಿ. ಶಿಕ್ಷಣಾಧಿಕಾರಿಗಳು.ಸಾ.ಶಿ.ಇ.ಕಲ್ಯಾಣ ನಗರ.ಧಾರವಾಡ ಇವರು1999 ರ KES ಬ್ಯಾಚ್ ನವರಾಗಿದ್ದು.ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಚಿಕ್ಕೋಡಿ.ಕೊಪ್ಪಳ ಕಲಘಟಗಿಗಳಲ್ಲಿ ಸೇವೆ ಸಲ್ಲಿಸಿ ನಂತರ DIET ಮಣ್ಣೂರ ಬೆಳಗಾವಿಯಲ್ಲಿ ಹಿರಿಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿತ್ತಿದ್ದಾಗ 14 ನೇ ಜನೇವರಿ 2015 ರಂದು ಮೆದುಳಿಗೆ ಪಾರ್ಶುವಾಯು ಆಗಿದ್ದು ಅಂದಿನಿಂದ ಇಂದಿನವರೆಗೆ ಪ್ರಪಂಚದ ಅರಿವೇ ಇಲ್ಲದೇ ಪ್ರಜ್ಞೆ ಕಳೆದುಕೊಂಡಿದ್ದು.ಶೇ.ನೂರರಷ್ಟು ಅಂಗ ವೈಕಲ್ಯತೆಯನ್ನು ಹೊಂದಿದ್ದಾರೆ
ಹೀಗಿರುವಂತೆ ಸದರಿಯವರಿಗೆ ಕರ್ನಾಟಕ ಸರ್ಕಾರ..ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪೂರ್ಣ ವೇತನವಾಗಲಿ..ಅರ್ಧ ವೇತನವಾಗಲಿ..ಯಾವುದೇ ರೀತಿಯ ಭತ್ಯೆಗಳಾಗಲಿ..ವೈದ್ಯಕೀಯ ವೆಚ್ಚದ ಮರುಪಾವತಿಯಾಗಲಿ..ಯಾವುದೇ ಬಗೆಯ ಪರಿಹಾರವಾಗಲಿ ಲಭಿಸಿರುವುದಿಲ್ಲ.ಸ್ವಯಂ ನಿವೃತ್ತಿಯನ್ನೂ ಕೊಟ್ಟಿಲ್ಲ.ಹಾಗೂ ಅವರ ಧರ್ಮ ಪತ್ನಿ ಶ್ರೀಮತಿ ಪ್ರಭಾವತಿಯವರಿಗೂ ಸರ್ಕಾರಿ ನೌಕರಿ ಕೊಡಲು ಕಾನೂನು ತೊಡಕು ಇದೆ ಎಂದಿರುವ ಬಗ್ಗೆ ಸಂಬಂದ್ಜಿಸಿದವರು ನಮ್ಮ ಸಂಘಕ್ಕೆ ಹಾಗೂ ಗೌರವಾನ್ವಿತ ಮಾಧ್ಯಮ ಮಿತ್ರರಿಗೆ ತಿಳಿಸಿರುವಂತೆ ನಮ್ಮ ಜೀವನಾಂಶಕ್ಕೆ ಮಕ್ಕಳ ವಿದ್ಯಾಭಾಸಕ್ಕೆ ಪತಿಯವರ ಔಷಧೋಪಚಾರಕ್ಕೆ ಬಹಳಷ್ಟು ಸ್ಥಿರ..ಚರಾಸ್ತಿಗಳನ್ನು ಮಾರಿ ಜೀವನ ನಡೆಸುತ್ತಿದ್ದೇವೆ ಎಂದಿದ್ದಾರೆ.ನಮ್ಮ ಕುಟುಂಬಕ್ಕೆ ದೇವರೇ ದಿಕ್ಕು ದೇವರೇ ಗತಿ ಎನ್ನುತ್ತ ಕಣ್ಣೀರಿನ ಹೊಳೆ ಹರಿಸುತ್ತಿದ್ದಾರೆ.

ಸದರಿಯವರು ಘನತೆವೆತ್ತ ಕರ್ನಾಟಕ ಸರ್ಕಾರಕ್ಕೆ ಸ್ವಯಂ ನಿವೃತ್ತಿ ನೀಡಿ ಹಾಗೂ ವಿಶೇಷ ಪ್ರಕರಣವೆಂದು ಪರಿಗಣಿಸಿ ಅವರ ಪತ್ನಿಯವರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಮನವಿ ಮಾಡಿದ ಪ್ರಸ್ರಾವನೆ ಸಲ್ಲಿಸಿದ್ದಾರೆ.ಕಳೆದ ವಾರದಲ್ಲಿ ಮಾಧ್ಯಮಗಳ ಮೂಲಕ ಈ ವಿಷಯ ತಿಳಿದ ಘನ ಸರ್ಕಾರದ ಮಾನ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಕರುಣಾಮಯಿ..ಶಿಕ್ಷಕ ಸ್ನೇಹಿಯಾಗಿರುವ ಮಾನ್ಯ ಶ್ರೀ ಸುರೇಶಕುಮಾರ್ ರವರು ಶ್ರೀಮತಿ ಪ್ರಭಾವತಿಯವರಿಗೆ ದೂರವಾಣಿ ಕರೆ ಮಾಡಿ ಅವರ ಕಷ್ಟ ಕಾರ್ಪಣ್ಯಗಳನ್ನು ಆಲಿಸಿ ಸಂಬಂಧಿಸಿದ ದಾಖಲೆಗಳನ್ನು ತರಿಸಿಕೊಂಡಿದ್ದನ್ನು ಮತ್ತು ಅವರಿಗೆ ಉದ್ಯೋಗ ಭರವಸೆಯನ್ನು ಕೊಟ್ಟಿರುವುದನ್ನು ತಿಳಿದು ನಮ್ಮ ಸಂಘವು ಗೌರವಾನ್ವಿತ ಸರ್ಕಾರದ ತತ್ ಕ್ಷಣದ ಸ್ಪಂಧನಾಶೀಲತೆಗೆ ಅಭಿವಂದಿಸುತ್ತೇವೆ.ಇದೇ ರೀತಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ.ರಿ.ರಾಜ್ಯ ಘಟಕ ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಕ್ಷರಿಯವರೂ ಸಹ ಈ ಸಂಗತಿ ಕುರಿತು ಸರ್ಕಾರಕ್ಕೆ ಪತ್ರ ಬರೆದಿರುತ್ತಾರೆ ಇವರಿಗೂ ಕೃತಜ್ಞತೆಗಳನ್ನು ತಿಳಿಸುತ್ತೇವೆ.

ಹೀಗಿರುವಂತೆ ರಾಷ್ಟ್ರದ ತ್ರಿಮೂರ್ತಿಗಳಾದ ಸೈನಿಕ- ಕೃಷಿಕ- ಶಿಕ್ಷಕ ದೇಶದ ಕಣ್ಣುಗಳು.ಸಾಗರದಷ್ಟು ವಿಶಾಲವಾಗಿರುವ ಶಿಕ್ಷಣ ಕ್ಷೇತ್ರದ ಅತ್ಯಂತ ಸಮೀಪದ ಅನುಷ್ಠಾನಾಧಿಕಾರಿಗಳೆಂದರೆ..ಶಿಕ್ಷಣಾಧಿಕಾರಿಗಳು.ಶಿಕ್ಷಕ- ಬಾಲಕ- ಪಾಲಕ ವ್ಯವಸ್ಥೆಯ ಮುಖ್ಯ ಅಧಿಕಾರಿಗಳಾಗಿರುವ ಇವರೂ ಸಹ ಅಧ್ಯಾಪಕರೇ ಹೌದು ಅಲ್ಲದೆ ನಮ್ಮ ಶಿಕ್ಷಕ ಸಮೂಹದಲ್ಲಿ ಹಿರಿಯ ಅಣ್ಣಂದಿರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ನಾವು ಮನವಿ ಮಾಡಿಕೊಂಡಿರುವ ಕುಟುಂಬದ ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತತ್ ಕ್ಷಣದಲ್ಲಿ ಮಾನ್ಯ ಶ್ರೀ ಮಹದೇವ.ಬಿ.ಮಾಳಗಿಯವರಿಗೆ ಸರ್ಕಾರದಿಂದ ಸಂವಿಧಾನ ಬದ್ಧವಾಗಿ..ಕೆ.ಸಿ.ಎಸ್.ಆರ್.ನಿಯಮಾವಳಿ.ಶಾಸನ ಬದ್ಧ ನಿಯಮಗಳು ಹಾಗೂ ಮಾನವೀಯತೆ ದೃಷ್ಟಿಯಿಂದ ದೊರೆಯಬೇಕಾಗಿರುವ ಐದು ವರ್ಷಗಳಿಂದ ಇಲ್ಲಿಯವರೆಗೆ ದೊರೆಯಬೇಕಾದ ವೇತನ..ಭತ್ಯೆ..ಚಿಕಿತ್ಸಾ ವೆಚ್ಚ ಮುಂತಾದ ಆರ್ಥಿಕ ಸೌಲಭ್ಯಗಳನ್ನು ನೀಡಬೇಕು ಹಾಗೂ ಅವರಿಗೆ ನಿವೃತ್ತಿ ನೀಡಿ ಅವರ ಪತ್ನಿಯವರಿಗೆ ಸರ್ಕಾರಿ ನೌಕರಿ ನೀಡುವಂತೆ ಪ್ರಕರಣ ಇತ್ಯರ್ಥಗೊಳಿಸಬೇಕೆಂದು ನಾಡಿನ ಸಮಸ್ತ ಶಿಕ್ಷಕ ಬಳಗದ ವತಿಯಿಂದ ಈ ಮೂಲಕ ತಮ್ಮಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇವೆ-ಪ್ರಾರ್ಥಿಸಿಕೊಳ್ಳುತ್ತೇವೆ.

ಗೌರವಾನ್ವಿತ ವಂದನೆಗಳೊಂದಿಗೆ

ತಮ್ಮ ವಿಧೇಯರು

ಪ್ರತಿಗಳನ್ನು ಗೌರವಪೂರಕವಾಗಿ ಮಾನ್ಯ ಮುಖ್ಯ ಮಂತ್ರಿಗಳವರ ಗಮನ ಸೆಳೆದ ನ್ಯಾಯದೊರಕಿಸಲು
೧* ಮಾನ್ಯಶ್ರೀ ಸುರೇಶಕುಮಾರ್ ರವರು
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು
ಕರ್ನಾಟಕ ಸರ್ಕಾರ ವಿಧಾನ ಸೌಧ ಬೆಂಗಳೂರು

೨ಮಾನ್ಯ ಶ್ರೀ ಜಗದೀಶ ಎಸ್.ಶೆಟ್ಟರವರು.ಮಾಜಿ ಮುಖ್ಯ ಮಂತ್ರಿಗಳು ಹಾಗೂ *
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು.ಕರ್ನಾಟಕ ಸರ್ಕಾರ ವಿಧಾನ ಸೌಧ ಬೆಂಗಳೂರು

೩ ಮಾನ್ಯ ಶ್ರೀಮತಿ ಶಶಿಕಲಾ ಜೊಲ್ಲೆಯವರು
ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಚಿವರು
ಕರ್ನಾಟಕ ಸರ್ಕಾರ ವಿಧಾನ ಸೌಧ ಬೆಂಗಳೂರು

೪ ಮಾನ್ಯ ಶ್ರೀ ಶಂಕರ ಪಾಟೀಲ ಮುನೇನಕೊಪ್ಪ.ಶಾಸಕರು ನವಲಗುಂದ ಹಾಗೂ ನೂತನ ಅಧ್ಯಕ್ಷರು.ಕರ್ನಾಟಕ ನಗರ ಮೂಲಭೂತ ಸೌಕರ್ಯ ನಿಗಮ ಬೆಂಗಳೂರು

ಮಾನ್ಯ ಶ್ರೀ ಅರವಿಂದ ಚಂದ್ರಕಾಂತ ಬೆಲ್ಲದ
ಶಾಸಕರು.ಹುಬ್ಬಳ್ಳಿ ಧಾರವಾಡ
………………………………………….

೧ ಮಾನ್ಯಶ್ರೀ ತ.ವಿಜಯಭಾಸ್ಕರ
ಸರ್ಕಾರದ ಮುಖ್ಯ ಕಾರ್ಯದರ್ಶಿಗಳು
ವಿಧಾನ ಸೌಧ ಬೆಂಗಳೂರು

೨ಮಾನ್ಯ ಶ್ರೀ ಎಸ್.ಆರ್.ಉಮಾಶಂಕರ್ ರವರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು*
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಎಮ್.ಎಸ್.ಬಿಲ್ಡಿಂಗ್ ಬೆಂಗಳೂರು

೩ಮಾನ್ಯ ಡಾ.ಕೆ.ಜಿ.ಜಗದೀಶ*
ಆಯುಕ್ತರು
ಸಾ.ಶಿ.ಇ.ಬೆಂಗಳೂರು

೪ ಮಾನ್ಯ ಶ್ರೀ ಮೇಜರ್ ಸಿದ್ಧಲಿಂಗಯ್ಯನವರು
ಅಪರ ಆಯುಕ್ತರು
ಸಾ.ಶಿ.ಇ.ಧಾರವಾಡ

೫ಮಾನ್ಯ ಆಯುಕ್ತರು*
ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಕಚೇರಿ ಬೆಂಗಳೂರು

೬ಸಂಘದ ಕಚೇರಿ ಪ್ರತಿ*


Spread the love

Leave a Reply

Your email address will not be published. Required fields are marked *